ದೈವಜ್ಞ ಕ್ರೆಡಿಟ್ ಕೋ- ಅಪರೇಟಿವ್ ಸೊಸೈಟಿನಲ್ಲಿ ಇ-ಸ್ಟಾಂಪಿಂಗ್ ಆರಂಭ

(ನ್ಯೂಸ್ ಕಡಬ) newskadaba.com ಮಂಗಳೂರು . 13: ಹೊಸಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ ಗ್ರಾಹಕರನ್ನು ಆಕರ್ಷಿಸುವ ಕೆಲಸವನ್ನು ಸಹಕಾರ ಸಂಘಗಳು ಮಾಡಬೇಕು. ಇದು ಸೊಸೈಟಿಯ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಸಹಕಾರ ಸಂಘಗಳ ಉಪನಿಬಂಧಕ ಶ್ರೀ ಪ್ರವೀಣ್.ಬಿ.ನಾಯಕ್ ಅಭಿಪ್ರಾಯ ಪಟ್ಟರು. ಅವರು ನಗರದ ರಥಬೀದಿ ಸಮೀಪದ ಭವಂತಿ ರಸ್ತೆಯ ಪ್ರೇಮಾ ಪ್ಲಾಜಾದಲ್ಲಿರುವ ದೈವಜ್ಞ ಕ್ರೆಡಿಟ್ ಕೋ- ಅಪರೇಟಿವ್ ಸೊಸೈಟಿ ಲಿ.ನ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ಇ-ಸ್ಟಾಂಪಿಂಗ್ ಉದ್ಘಾಟಿಸಿ ಮಾತನಾಡಿದರು.

 

ದೈವಜ್ಞ ಕ್ರೆಡಿಟ್ ಕೋ- ಅಪರೇಟಿವ್ ಸೊಸೈಟಿ ತನ್ನದೇ ಆದ ಶೈಲಿಯಲ್ಲಿ ಉತ್ತಮವಾಗಿ, ಕ್ರಮಬದ್ಧವಾಗಿ, ಅರ್ಥಪೂರ್ಣವಾಗಿ ಕಾರ್ಯನಿರ್ವಾಹಿಸುತ್ತಿದೆ. ಸೊಸೈಟಿಯ ಯೋಜನೆಗಳು ಹೆಚ್ಚು ಹೆಚ್ಚು ಜನರಿಗೆ ತಲುಪುವ ನಿಟ್ಟಿನಲ್ಲಿ ಸಿಬ್ಬಂದಿಗಳು ಶ್ರಮಿಸಬೇಕು. ಸೊಸೈಟಿಯು ತನ್ನ ಗ್ರಾಹಕರಿಗೆ ಇನ್ನು ಹೆಚ್ಚಿನ ಹೊಸ ಯೋಜನೆಗಳನ್ನು ನೀಡುವ ಮೂಲಕ ಅಧ್ಯಕ್ಷರು, ನಿರ್ದೇಶಕರು ಹಾಗೂ ಸಿಬ್ಬಂದಿಗಳ ಸತತ ಪರಿಶ್ರಮದಿಂದ ಉತ್ತರೋತ್ತರವಾಗಿ ಬೆಳೆದು ದ.ಕ.ಜಿಲ್ಲೆಯಲ್ಲೇ ಮಾದರಿ ಸೊಸೈಟಿಯಾಗಿ ಮೂಡಿಬರಬೇಕು. ಈ ನಿಟ್ಟಿನಲ್ಲಿ ಇಲಾಖೆ ಸಂಪೂರ್ಣ ಸಹಕಾರ ನೀಡುತ್ತದೆ ಎಂದು ಪ್ರವೀಣ್.ಬಿ.ನಾಯಕ್ ಹೇಳಿದರು.

Also Read  ಇಂದು (ಸೆ. 24) ಕಡಬ ತಾಲೂಕು ದಸರಾ ಕ್ರೀಡಾಕೂಟ

 

ಮುಖ್ಯ ಅಥಿತಿಗಳಾಗಿ ಭಾಗವಹಿಸಿದ ವಿಶ್ವಕರ್ಮ ಸಹಕಾರ ಬ್ಯಾಂಕ್ ಲಿನ ಅಧ್ಯಕ್ಷರಾದ ಶ್ರೀ ಹರೀಶ್ ಆಚಾರ್ ಹಾಗೂ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘ (ನಿ)ಇದರ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೋಳಾರ್ ಇವರು ಸೊಸೈಟಿಯ ಎಲ್ಲಾ ಯೋಜನೆಗಳು ಯಶಸ್ಸು ಕಾಣಲಿ ಎಂದು ಶುಭಾಹಾರೈಸಿದರು. ದೈವಜ್ಞ ಕ್ರೆಡಿಟ್ ಕೋ- ಅಪರೇಟಿವ್ ಸೊಸೈಟಿ ಲಿ.ನ ಅಧ್ಯಕ್ಷ ಎಂ. ಆಶೋಕ್ ಶೇಟ್ ಸ್ವಾಗತಿಸಿದರು. ಮುಖ್ಯಕಾರ್ಯನಿರ್ವಾಹಣಾಧಿಕಾರಿ ಎಂ. ಸಂತೋಷ್ ಶೇಟ್ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಪ್ರಮೋದ್ ಕೆ. ಶೇಟ್, ನಿರ್ದೇಶಕರಾದ ಎಸ್. ರಮಾನಂದ ಶೇಟ್, ಕೆ.ಸುಧಾಕರ್ ಶೇಟ್, ಶ್ರೀಪಾದ ರಾಯ್ಕರ್, ಮನೋಹರ್ ಶೇಟ್, ಗಜೇಂದ್ರ ಶೇಟ್, ಗುರುಪ್ರಸಾದ್ ಶೇಟ್, ಶ್ರೀಮತಿ ಪುಷ್ಪ.ಕೆ.ಶೇಟ್, ಶ್ರೀಮತಿ ಸುಭದ್ರ ಬಾಯಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Also Read  ಭತ್ತ ಬೆಳೆಗಾರರಿಗೆ “ಕರಾವಳಿ ಪ್ಯಾಕೇಜ್” ➤ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ

 

 

error: Content is protected !!
Scroll to Top