ಗೂಡುದೀಪದಲ್ಲಿ ಕೊರೊನಾ ಜಾಗೃತಿ ➤ ಹಲವರ ಗಮನ ಸೆಳೆಯುತ್ತಿದೆ ಈ ಗೂಡುದೀಪ

(ನ್ಯೂಸ್ ಕಡಬ) newskadaba.com ಕಾರ್ಕಳ . 13: ದೀಪಾವಳಿಯ ಗೂಡುದೀಪದ ಮೂಲಕ ಕೊರೊನಾ ಜಾಗೃತಿ ಮೂಡಿಸುವ ಪ್ರಯತ್ನವನ್ನು ಕಾರ್ಕಳ ಪುರಸಭಾ ಸದಸ್ಯ ಶುಭದ್ ರಾವ್ ಮಾಡಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಈ ಗೂಡು ದೀಪದಲ್ಲಿ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ, ಹ್ಯಾಂಡ್ ವಾಶ್ ಮಾಡಿ ಮತ್ತು ಸಾಮಾಜಿಕ ಅಂತರ ಕಾಪಾಡಿ ಎಂಬ ಚಿತ್ರದೊಂದಿಗೆ ಸಂದೇಶಗಳನ್ನು ಬರೆದಿದ್ದಾರೆ.

 

ಪುರಸಭೆ ಸದಸ್ಯರಾಗಿರುವ ಶುಭದ್ ರಾವ್ ಕಳೆದ ಮೂರು ವರುಷಗಳಿಂದ ಗೂಡುದೀಪ ಸ್ಪರ್ದೆಯನ್ನು ಆಯೋಜಿಸುತ್ತಿದ್ದರು. ಆದರೆ ಈ ಬಾರಿ ಕೋವಿಡ್ 19 ಕಾರಣದಿಂದ ಸ್ಪರ್ಧೆ ಆಯೋಜಿಸಲು ಸಾದ್ಯವಾಗಿಲ್ಲ. ಹೀಗಾಗಿ ಗೂಡುದೀಪದ ಮೂಲಕ ಕೋವಿಡ್ ಸಂದೇಶವನ್ನು ಸಾರಿದ್ದಾರೆ. ಇದೀಗಾ ಈ ಗೂಡುದೀಪ ಹಲವರ ಗಮನ ಸೆಳೆಯುತ್ತಿದೆ.

Also Read  ವಿಟ್ಲ: ಬೈಕ್ ಗಳ ನಡುವೆ ಮುಖಾಮುಖಿ ಢಿಕ್ಕಿ..!  ➤  ಓರ್ವನಿಗೆ ಗಂಭೀರ ಗಾಯ      

 

error: Content is protected !!
Scroll to Top