ಕಡಬ ತಾಲೂಕು ಕ್ರೀಡಾಧಿಕಾರಿಯಾಗಿ ದೈಹಿಕ ಶಿಕ್ಷಣ ಶಿಕ್ಷಕ ರಾಮಚಂದ್ರ ಪಿ.ಎನ್ ನೇಮಕ

(ನ್ಯೂಸ್ ಕಡಬ) newskadaba.com ಕಡಬ, .13: ಕಡಬ ತಾಲೂಕು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ತಾಲೂಕು ಕ್ರೀಡಾಧಿಕಾರಿಯಾಗಿ ಎಣ್ಮೂರು ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ರಾಮಚಂದ್ರ ಪಿ.ಎನ್.ರವರು ನ.7 ರಂದು ಅಧಿಕಾರ ಸ್ವೀಕರಿಸಿದ್ದಾರೆ.

 

 

ಪ್ರಸ್ತುತ ಎಣ್ಮೂರು ಪ್ರೌಢಶಾಲೆಯಲ್ಲಿ ಸತತ 12 ವರ್ಷಗಳಿಂದ ಕೆಲಸ ನಿರ್ವಹಿಸುತಿದ್ದು, ಹಿಂದೆ ಪುತ್ತೂರಿನ ಕೊಂಬಾರು, ರಾಮಕುಂಜ, ಮಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಇವರು ಕಬ್ಬಡ್ಡಿ ರಾಷ್ಟ್ರೀಯ ತೀರ್ಪುಗಾರರಾಗಿದ್ದು, ಖೋ ಖೋ ಆಟದ ರಾಜ್ಯ ಮಟ್ಟದ ತೀರ್ಪುಗಾರರು. ಸುಳ್ಯ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಗದ ಮಾಜಿ ಅಧ್ಯಕ್ಷ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಮಾಜಿ ಉಪಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಇವರು ಪತ್ನಿ ವನಿತಾ ಕುಂತೂರು ಪದವಿನಲ್ಲಿ ಶಿಕ್ಷಕಿಯಾಗಿದ್ದಾರೆ. ಇನ್ನು ಮಕ್ಕಳು ಸಿಂಚನಾ ಮತ್ತು ಸೃಜನ್ ಅವರನ್ನು ಹೊಂದಿದ್ದಾರೆ.

Also Read  ಅನ್ವಾರುಲ್ ಹುದಾ ಶಾದಿಮಹಲ್ ಕಟ್ಟಡಕ್ಕೆ ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್ ಅವರಿಂದ 5 ಲಕ್ಷ ರೂ. ಅನುದಾನ ಬಿಡುಗಡೆ

 

 

error: Content is protected !!
Scroll to Top