ಮಂಗಳೂರು ವಿವಿ : ಡಿ.1ರಿಂದ ಪದವಿ,ಸ್ನಾತಕೋತ್ತರ ಪದವಿ ಕಾಲೇಜು ಆರಂಭ

(ನ್ಯೂಸ್ ಕಡಬ) newskadaba.com ಮಂಗಳೂರು . 13: ಡಿ.1ರಿಂದ ಮಂಗಳೂರು ವಿಶ್ವವಿದ್ಯಾಲಯ ಅಧೀನದ ಪದವಿ ಹಾಗೂ ಸ್ನಾತಕೋತ್ತರ ಪದವಿ ತರಗತಿಗಳು ಆರಂಭಗೊಳ್ಳಲಿವೆ. ಕೋವಿಡ್ 19 ಅನ್ ಲಾಕ್ ಬಳಿಕ, ನ.17ರಿಂದ ಶಾಲಾ ಕಾಲೇಜು ಆರಂಭಕ್ಕೆ ಕೇಂದ್ರ ಸರಕಾರ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಡಿ.1ರಿಂದ ಕಾಲೇಜು ಆರಂಭಿಸಲು ನಿರ್ಧರಿಸಲಾಗಿದೆ. ವಿವಿ ಕುಲಪತಿ ಪ್ರೊ. ಯಡಪಡಿತ್ತಾಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಂಡಿದ್ದಾರೆ.

 

ಕೋವಿಡ್ ನಿಯಮ ಪಾಲಿಸಿಕೊಂಡು ಮಂಗಳೂರು, ಉಡುಪಿ, ಕೊಡಗು ವ್ಯಾಪ್ತಿಯಲ್ಲಿರುವ ವಿವಿಯ ಅಧೀನದ ಕಾಲೇಜುಗಳಲ್ಲಿ ತರಗತಿ ಆಋಂಭಗೊಳ್ಳಲಿವೆ. ಆನ್ ಲೈನ್ ಅಥವಾ ತರಗತಿಗೆ ಹಾಜರಾಗುವುದು ವಿದ್ಯಾರ್ಥಿಗಳಿಗೆ ಬಿಟ್ಟಿದ್ದು. ತರಗತಿ ನಡೆಸುವ ವೇಳೆ ಆನ್ ಲೈನ್ ತರಗತಿಗೂ ವ್ಯವಸ್ಥೆ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ. ಒಂದು ತಿಂಗಳ ಬಳಿಕ ಪ್ರಥಮ ಸೆಮಿಸ್ಟರ್ ಪರೀಕ್ಷೆ ನಡೆಸಲು ಚಿಂತಿಸಲಾಗಿದೆ. ಮೊದಲು ವಿದ್ಯಾರ್ಥಿಗಳು ಯಾವ ತರಗತಿಗೆ ಹಾಜರಾಗಬೇಕು ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ತರಗತಿಗೆ ಹಾಜರಾಗುವ ಅಥವಾ ಆಫ್ ಲೈನ್ ತರಗತಿಗೆ ಹಾಜರಾಗಲು ಹೆತ್ತವರ ಅನುಮತಿ ಬೇಕು ಎಂದು ವಿವಿ ಕುಲಪತಿ ಯಡಿಪತ್ತಾಯ ಹೇಳಿದ್ದಾರೆ.

 

error: Content is protected !!

Join the Group

Join WhatsApp Group