ಸುಳ್ಯ: ಗ್ರಾಮ ಪಂಚಾಯತ್ ಚುನಾವಣೆ ಪ್ರಯುಕ್ತ ಪೂರ್ವಭಾವಿ ಸಭೆ

(ನ್ಯೂಸ್ ಕಡಬ) newskadaba.com ಸುಳ್ಯ.13: ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯ ಪೂರ್ವಭಾವಿಯಾಗಿ ಸಂಪಾಜೆ ,ಅರಂತೋಡು ಮತ್ತು ಮರ್ಕಂಜ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರ ಸಭೆಯು ಗೂನಡ್ಕ ಕಾಂಗ್ರೆಸ್ ಕಛೇರಿಯಲ್ಲಿ ಕಳೆದ ದಿನ ನಡೆಯಿತು .

 

 

ಕಾರ್ಯಕ್ರಮದ  ಅಧ್ಯಕ್ಷತೆಯನ್ನು ಸುಳ್ಯ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಜಯಪ್ರಕಾಶ್ ರೈ ವಹಿಸಿದರು.ಸುಳ್ಯ ವಿಧಾನಪರಿಷತ್ ಉಸ್ತುವಾರಿ ಕೆಪಿಸಿಸಿ ವಕ್ತಾರ ಐವನ್ ಡಿ’ಸೋಜ,ಸುಳ್ಯ ಬ್ಲಾಕ್ ಉಸ್ತುವಾರಿ ಸದಾಶಿವ ಶೆಟ್ಟಿ ಸುರತ್ಕಲ್ ,ಕಡಬ ಬ್ಲಾಕ್ ಉಸ್ತುವಾರಿ ನಂದಕುಮಾರ್,ಕೆಪಿಸಿಸಿ ಮಾಧ್ಯಮ ವಕ್ತಾರ ಶೌವಾದ್ ಗೂನಡ್ಕ,ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್ ,ಸುಜಯ್ ಕೃಷ್ಣ,ಮಹಮ್ಮದ್ ಕುಂಞ ಗೂನಡ್ಕ,ಜನಾರ್ಧನ ಅಡ್ಕಬಳೆ,ಮೋಹಿನಿ ಪೆಲ್ತಡ್ಕ,ಜಿ.ಕೆ.ಹಮೀದ್,ಜಗದೀಶ್ ರೈ,ಮುಂತಾದವರು ಉಪಸ್ಥಿತರಿದ್ದರು . ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಸದಸ್ಯರು ಕಾರ್ಯಕ್ರಮವನ್ನು ಸ್ವಾಗತಿಸಿ ವಂದಿಸಿದರು.

Also Read  ಕಡಬ ಬ್ಲಾಕ್ ಕಾಂಗ್ರೆಸ್ ಮಾಧ್ಯಮ ಸಂಯೋಜಕರಾಗಿ ► ಶರೀಫ್ ಬದ್ರಿಯಾ ನೇಮಕ

 

error: Content is protected !!
Scroll to Top