ದೀಪಾವಳಿಗೆ ಹಸಿರು ಪಟಾಕಿ ಮಾತ್ರ ಬಳಕೆ ➤ ನಿಯಮ ಮೀರಿದ್ರೆ “ಈ” ಶಿಕ್ಷೆ – ದ.ಕ. ಡಿಸಿ

(ನ್ಯೂಸ್ ಕಡಬ) newskadaba.com ಕರಾವಳಿ . 13: ಕೊರೋನಾ ಕಾರಣದಿಂದಾಗಿ ರಾಜ್ಯ ಸರ್ಕಾರ ಪಟಾಕಿಯನ್ನು ನಿಷೇದಿಸಿತ್ತು. ಆದ್ರೇ ಹಸಿರು ಪಟಾಕಿ ಹೊಡೆದು, ದೀಪಾವಳಿ ಹಬ್ಬ ಆಚರಣೆಗೆ ಅನುಮತಿಸಿತ್ತು. ಇಂತಹ ಹಸಿರು ಪಟಾಕಿ ಮಾರಾಟಕ್ಕೆ ರಾಜ್ಯಾದ್ಯಂತ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.ಅದರಂತೆ ಕರಾವಳಿಯಲ್ಲಿಯು, ಕೋವಿಡ್‌-19 ಹಿನ್ನೆಲೆಯಲ್ಲಿ ಪಟಾಕಿ ನಿಷೇಧಿಸಿ, ಸರಕಾರ ಆದೇಶಿಸಿದ್ದು, ಜತೆಗೆ ದೀಪಾವಳಿ ಸಂದರ್ಭ ಹಸಿರು ಪಟಾಕಿ ಮಾತ್ರ ಸುಡಬಹುದು ಎಂಬ ನಿರ್ದೇಶನ ಹೊರಡಿಸಿದೆ.

 

ಆದಾಗ್ಯೂ ನಿಯಮ ಮೀರಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹೇಳಿದ್ದಾರೆ.ಸಾಂಪ್ರದಾಯಿಕ ಪಟಾಕಿಯಿಂದ ಹಸಿರು ಪಟಾಕಿಗಳು ಗಾತ್ರದಲ್ಲಿ ಸಣ್ಣದಿರುತ್ತವೆ. ಅದನ್ನು ಕಡಿಮೆ ಅಪಾಯಕಾರಿ ಕಚ್ಚಾ ವಸ್ತುಗಳ ಬಳಕೆಯಿಂದ ಉತ್ಪಾದಿಸುತ್ತಿದ್ದು, ಇದರಿಂದ ಧೂಳು, ಹೊಗೆ, ಮಾಲಿನ್ಯ ಪ್ರಮಾಣ ಕಡಿಮೆ ಇರುತ್ತದೆ.ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ದೀಪಾವಳಿ ಸಂದರ್ಭ ಹಸಿರು ಪಟಾಕಿ ಬಿಟ್ಟು ಉಳಿದ ಯಾವುದೇ ಪಟಾಕಿ ಮಾರಾಟ ಮಾಡುವಂತಿಲ್ಲ. ಅಧಿಕೃತ ಪರವಾನಗಿ ಪಡೆದ ಮಾರಾಟಗಾರರು ಹಸಿರು ಪಟಾಕಿ ಮಾತ್ರ ಮಾರಾಟ ಮಾಡಬೇಕು. ನಿಯಮ ಮೀರಿದವರ ಮೇಲೆ ಕ್ರಮಕ್ಕಾಗಿ ಸ್ಥಳೀಯ ಸಂಸ್ಥೆಗಳಿಗೆ ಪತ್ರ ಬರೆಯಲಾಗಿದೆ.ಎಂದು ದಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ತಿಳಿಸಿದ್ದಾರೆ.

Also Read  ಮರದ ಎಲೆಗಳನ್ನು ತಿಂದ ಸಿಂಹ - ವಿಡಿಯೋ ವೈರಲ್

 

 

 

error: Content is protected !!
Scroll to Top