ಪ್ರಖ್ಯಾತ ಸೈಕಲ್ ಕವಿ ‘ಐರಸಂಗ’ ವಿಧಿವಶ

(ನ್ಯೂಸ್ ಕಡಬ) newskadaba.com ಧಾರವಾಡ . 13: ಸೈಕಲ್ ಕವಿ ಎಂದೇ ಪ್ರಖ್ಯಾತರಾಗಿದ್ದ ಆಶುಕವಿ ಐರಸಂಗ(91) ನಿಧನರಾಗಿದ್ದಾರೆ. ತಮ್ಮ ಜೀವನದುದ್ದಕ್ಕೂ ಬಡತನ ಹೊದ್ದು ಬೆಳೆದ ಅವರು ಸೈಕಲ್ ಮೇಲೆಯೇ ಸುತ್ತಾಡುತ್ತಿದ್ದರು.

 

50ಕ್ಕೂ ಹೆಚ್ಚು ಕವನ ಸಂಕಲನಗಳನ್ನು ರಚಿಸಿದ್ದ ಅವರ ಸಾಹಿತ್ಯ ಕೊಡುಗೆ ನೋಡಿ ಧಾರವಾಡದ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿತ್ತು.ಅವರು ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಧಾರವಾಡದ ಜರ್ಮನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಇಂದು ಬೆಳಗಿನ ಜಾವ ವಿಧಿವಶರಾಗಿದ್ದಾರೆ. ವಿಸಿ ಅವರ ಮಗ , ಮಗಳು ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Also Read  ಮೀನಾಡಿ: ಶಿಕ್ಷಕನಿಂದ ತನ್ನ ಪತ್ನಿಯ ಸ್ಮರಣಾರ್ಥ ಶಾಲೆಗೆ ಆರ್ಥಿಕ ನೆರವು

 

 

error: Content is protected !!
Scroll to Top