ನ. 14ರ ನಾಳೆ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಮಲ್ಪೆ ಬೀಚ್ನಲ್ಲಿ ವಿಂಚ್ ಪ್ಯಾರಾಸೈಲಿಂಗ್ ಬೋಟ್ ಸಮಾರಂಭ

(ನ್ಯೂಸ್ ಕಡಬ) newskadaba.com ಉಡುಪಿ . 13: ಮಲ್ಪೆ ಬೀಚ್ನಲ್ಲಿ ಅಡ್ಡೆಂಚರ್ ವಾಟರ್ ಸ್ಪೋರ್ಟ್ ವತಿಯಿಂದ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಮಲ್ಪೆ ಬೀಚ್ನಲ್ಲಿ ವಿಂಚ್ ಪ್ಯಾರಾಸೈಲಿಂಗ್ ಬೋಟ್ ಸಮಾರಂಭವು ನ. 14ರಂದು ಮತ್ತೆ ಬೀಚ್ನಲ್ಲಿ ನಡೆಯಲಿದೆ.ಉಡುಪಿ ಶಾಸಕ ಕೆ. ರಘುಪತಿ ಭಟ್ ಹಾಗೂ ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇ ಶನ್ನ ಅಧ್ಯಕ್ಷ ಯಶ್ಪಾಲ್ ಸುವರ್ಣ ಉದ್ಘಾಟಿಸಲಿದ್ದಾರೆ.

 

ಸಮುದ್ರ ಮಧ್ಯೆ ಬೋಟ್ ಮೇಲಿಂದಲೇ ಹಾರಾಟ ನಡೆಸಿ ಬೋಟ್ ನಲ್ಲೇ ಲ್ಯಾಂಡ್ ಆಗಬಹುದು. ಗೋವಾ ಮಹಾರಾಷ್ಟ್ರದ ಮಾಲ್ವನ್ ಮತ್ತು ಥೈಲ್ಯಾಂಡ್ ನಲ್ಲಿ ಈಗಾಗಲೇ ಇದು ಜನಪ್ರಿಯಗೊಂಡಿದ್ದು, ವಿಂಚ್ ಪ್ಯಾರಾ ಸೈಲಿಂಗ್ ನಲ್ಲಿ ಪ್ರವಾಸಿಗರಿಗೆ ಬೋಟ್ ರೈಡಿಂಗ್ ಮತ್ತು ಹಾರಾಟ ಎರಡೂ ಒಂದರಲ್ಲೇ ಸಿಗಲಿದೆ ಬೋಟ್ನಲ್ಲಿ 15 ಮಂದಿಗೆ ತೆರಳಲು ಅವಕಾಶವಿದ್ದು ಎರಡು ಅಥವಾ ಮೂರು ಮಂದಿ ಮೇಲೆ ಹಾರಾಟ ನಡೆಸಬಹುದಾಗಿದೆ. 350ಅಶ್ವಶಕ್ತಿಯುಳ್ಳ ಬೋಟ್ ಹೈಸ್ಪಿಡ್ನಲ್ಲಿ ಚಲಿಸಿ, ಸುಮಾರು 100 ಮೀಟರ್ ಎತ್ತರದಲ್ಲಿ 90 ಡಿಗ್ರಿ ಮೇಲೆ ಕೊಂಡೊಯ್ಯುತ್ತದೆ.

Also Read  ಶಾಲಾ ಆವರಣದೊಳಗೆ ಮದ್ಯ ಸೇವನೆ - ಇಬ್ಬರು ಶಿಕ್ಷಕರು ಅಮಾನತು

 

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಗರಸಭಾಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ, ದಕ್ಷಿಣಕನ್ನಡಮೊಗವೀರ ಮಹಾಜನ ಸಂಘ ಉಚ್ಚಿಲ ಇದರ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಕರಾವಳಿ ಅಭಿವೃದ್ಧಿ ತೊಟ್ಟಂ ಪಂಡರೀನಾಥ ಭಕ್ತಿ ಉದಯ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಜಿಲ್ಲಾ ಮೊಗವೀರ ಯುವ ಸಂಘಟನೆಯ ನಿಕಟಪೂರ್ವ ಅಧ್ಯಕ್ಷ ವಿನಯ ಕರ್ಕೇರ,ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.

Also Read  ಉಪ್ಪಿನಂಗಡಿ ಬ್ಲಾಕ್ ವತಿಯಿಂದ SDPI ಮಹಿಳಾ ಚುನಾವಣಾ ಪೂರ್ವಭಾವಿ ಸಭೆ

 

error: Content is protected !!
Scroll to Top