(ನ್ಯೂಸ್ ಕಡಬ) newskadaba.com ಪಡುಬಿದ್ರಿ, ನ.13: ವರ್ತೆ ಪಂಜುರ್ಲಿ ದೈವಸ್ಥಾನ ಕಾಪು ತಾಲೂಕು ನಡ್ಸಾಲು ಗ್ರಾಮದ ಕಾಡಿಪಟ್ನ ಎಂಬಲ್ಲಿ ದೇವಸ್ಥಾನದ ಬೀಗ ಮುರಿದು ಕಳ್ಳರು ಕಳವುಗೈದಿರುವ ಘಟನೆ ನಡೆದಿದೆ.
ದೈವಸ್ಥಾನದ ಒಳಗಿದ್ದ ಬೆಳ್ಳಿಯ ವಸ್ತುಗಳಾದ ಪಂಜುರ್ಲಿ ದೈವದ ಬೆಳ್ಳಿಯ ಪ್ರಬಾವಳಿ, ಪಂಜುರ್ಲಿ ದೈವದ 250 ಗ್ರಾಂ ತೂಕದ ಬೆಳ್ಳಿಯ ಖಡ್ಸಲೆ, 4ಗ್ರಾಂ ತೂಕದ ನವರತ್ನ ಚಿನ್ನದ ಸರ, 8 ಗ್ರಾಂ ತೂಕದ ಚಿನ್ನದ ಕರಿಮಣಿ ಸರ, 5 ಗ್ರಾಂ ತೂಕದ ಚಿನ್ನದ ಹವಳದ ಸರ, 2.2 ಗ್ರಾಂ ತೂಕದ ಚಿನ್ನದ ಸರ, ಪಂಜುರ್ಲಿ ದೈವಸ್ಥಾನದ ತಿರುಪತಿಯ ಕಾಣಿಕೆ ಡಬ್ಬಿಯನ್ನು ಒಡೆದು ಅದದಲ್ಲಿದ್ದ ನಗದು 1,500 ರೂಪಯಿ ಕಳ್ಳತನ ಮಾಡಿದ್ದಾರೆ. ಕಳವಾದ ಒಟ್ಟು ಸೊತ್ತಿನ ಅಂದಾಜು ಬೆಲೆ 50 ,000/- ರೂಪಾಯಿ ಎಂದು ತಿಳಿದುಬಂದಿದೆ. ಪ್ರಕರಣದ ಬಗ್ಗೆ ಪಡುಬಿದ್ರಿ ಠಾಣೆಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.