ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನ ► ನವರಾತ್ರಿ ಉತ್ಸವ, ಹೊಸಅಕ್ಕಿ ನೈವೇದ್ಯ

(ನ್ಯೂಸ್ ಕಡಬ) newskadaba.com ಕಡಬ,ಅ.4. ರೆಂಜಿಲಾಡಿ ಗ್ರಾಮದ ನೂಜಿಬೈಲ್ ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ಸನ್ನಿಧಿಯಲ್ಲಿ ನವರಾತ್ರಿ ಉತ್ಸವ ಅಂಗವಾಗಿ, ಆಯುಧಪೂಜೆ, ಅಕ್ಷರಾಭ್ಯಾಸ ಹಾಗೂ ಹೊಸಅಕ್ಕಿ ನೈವೇದ್ಯ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು.

ಧಾರ್ಮಿಕ ವಿಧಿವಿಧಾನಗಳನ್ನು ಕ್ಷೇತ್ರದ ಪ್ರಧಾನ ಅರ್ಚಕರಾದ ಶಶಿ ಗಿರಿವನ ನಾಲೂರು ನೆರವೇರಿಸಿದರು. ಅರ್ಚಕ ಕೃಷ್ಣ ಹೆಬ್ಬಾರ್ ಸಹಕರಿಸಿದರು. ನವರಾತ್ರಿ ಸಂದರ್ಭದಲ್ಲಿ ದೇವಳದಲ್ಲಿ ಆಯುಧಪೂಜೆ,  ಅಕ್ಷರಾಭ್ಯಾಸ ಹಾಗೂ ಹೊಸಅಕ್ಕಿ ನೈವೇದ್ಯ ಕಾರ್ಯಕ್ರಮವು ಜರುಗಿತು. ದೇವಳದ ಆಡಳಿತ ಸಮಿತಿ ಅಧ್ಯಕ್ಷ ರಾಮಚಂದ್ರ ಗೌಡ ಎಳುವಾಲೆ, ಕಾರ್ಯದರ್ಶಿ ಬಾಲಕೃಷ್ಣ ಗೌಡ ಉಳಿಪ್ಪು, ಮತ್ತು ಸದಸ್ಯರು, ದೈವಸ್ಥಾನದ ಪ್ರಧಾನ ಪರಿಚಾರಕ ವಿಜಯ ಕುಮಾರ್ ಕೇಪುಂಜ ಹಾಗೂ ಪರಿಚಾರಕ ವರ್ಗ ಸೇರಿದಂತೆ ಊರ ಪರವೂರ ಅಪಾರ ಭಕ್ತಾಧಿಗಳು ಭಾಗವಹಿಸಿದ್ದರು.

error: Content is protected !!

Join the Group

Join WhatsApp Group