ಗೋಶಾಲೆಗಳ ನೆರವಿಗೆ 900 ಕೋ.ರೂ.ಗಳ ಯೋಜನೆ ➤ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್

(ನ್ಯೂಸ್ ಕಡಬ) newskadaba.com ಉಡುಪಿ ನ. 12  : ದೇಶದಲ್ಲಿರುವ ಗೋಶಾಲೆಗಳು ಹಾಗೂ ಸಂಬಂಧಿತ ಚಟುವಟಿಕೆಗಳಿಗೆ 900 ಕೋಟಿ ರೂ.ಗಳನ್ನು ಮೀಸಲಿರಿಸಿ ಅದನ್ನು ಸಂಬಂಧಿತ ಸಚಿವಾಲಯಕ್ಕೆ ಹಸ್ತಾಂತರಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಮಂಗಳವಾರ ಹೊಸದಿಲ್ಲಿಯ ತಮ್ಮ ನಿವಾಸದಲ್ಲಿ ಭೇಟಿಯಾದ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರೊಂದಿಗೆ ನಡೆಸಿದ ಮಾತುಕತೆಯ ವೇಳೆ ಅವರು ಈ ವಿಷಯವನ್ನು ತಿಳಿಸಿದರು. ಕೊರೋನದಿಂದಾಗಿ ದೇಶದ ಗೋಶಾಲೆಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿ ರುವ ಹಿನ್ನೆಲೆಯಲ್ಲಿ ಕೇಂದ್ರದಿಂದ ಕನಿಷ್ಠ 200 ಕೋಟಿ ಪರಿಹಾರವನ್ನು ಒದಗಿಸುವಂತೆ ಕೋರಿ ಕಳೆದ ಆಗಸ್ಟ್ ತಿಂಗಳಲ್ಲಿ ತಾನು ಬರೆದ ಪತ್ರದ ಕುರಿತು ಪ್ರಸ್ತಾಪಿಸಿದಾಗ ಸಚಿವೆ ಈ ವಿಷಯ ತಿಳಿಸಿದರು. ಸರಕಾರ ಈಗಾಗಲೇ ಗೋಶಾಲೆಗಳಿಗೆ ಸಂಬಂಧಿಸಿದ ಚಟುವಟಿಕೆಗಳಿಗೆ 900 ಕೋಟಿ ರೂ.ಗಳನ್ನು ಸಂಬಂಧಿತ ಇಲಾಖೆಗೆ ಬಿಡುಗಡೆ ಗೊಳಿಸಿದೆ.ಈ ಬಗ್ಗೆ ರಾಜ್ಯ ಸರಕಾರಗಳೊಂದಿಗೆ ಸಮಾಲೋಚಿಸಿ, ಅಲ್ಲಿಂದ ವರದಿಯನ್ನು ತರಿಸಿ ಮಾರ್ಗಸೂಚಿಯಂತೆ ನಿಧಿಯ ವಿತರಣೆ ಹಾಗೂ ವಿನಿಯೋಗವನ್ನು ಇಲಾಖೆ ಮಾಡಲಿದೆ ಎಂದು ಸಚಿವೆ ಶ್ರೀಗಳಿಗೆ ಉತ್ತರಿಸಿದರು ಎಂದು ತಿಳಿದು ಬಂದಿದೆ.

Also Read  ಪಿಲಿಕುಳ: ಎಂಜಾಯ್ ಮಾಡುತ್ತಿದ್ದ ಭಿನ್ನ ಕೋಮಿನ ಜೋಡಿಗಳು ► ಹಿಂದೂ ಸಂಘಟನೆಯ ಕಾರ್ಯಕರ್ತರಿಂದ ನಾಲ್ವರಿಗೆ ಥಳಿತ

error: Content is protected !!
Scroll to Top