ಬಂಟ್ವಾಳ: ಗಾಂಜಾ ಮಾರಾಟಕ್ಕೆ ಯತ್ನ ➤ ನೇಪಾಳದ ಯುವಕ ಸೇರಿ ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಬಂಟ್ವಾಳ . 11: ಬಂಟ್ವಾಳದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸಿದ ನೇಪಾಳ ಮೂಲದ ಯುವಕ ಸೇರಿ ಇಬ್ಬರನ್ನು ಇಂದು  ಪೋಲಿಸರು ಬಂಧಿದ್ದಾರೆ.

 

 

 

ಮಂಗಳೂರು ನಿವಾಸಿ ಟಿ.ಪಿ ಫಾರೂಕ್‌ (50), ಹಾಗೂ ನೇಪಾಳ ನಿವಾಸಿ ಸಾಗರ್‌ ಸಿಂಗ್‌ (22), ಬಂಧಿತ ಆರೋಪಿಗಳು. ಬಂಧಿತರಿಂದ 10,32,900 ರೂ. ಮೌಲ್ಯದ ಒಟ್ಟು 1.480 ಕಿ.ಗ್ರಾಂ ಗಾಂಜಾವನ್ನು ಮತ್ತು ಅದನ್ನು ಸಾಗಾಟ ಮಾಡಲು ಉಪಯೋಗಿಸಿದ ಮಾರುತಿ ಬ್ರೀಝಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ.ಇಬ್ಬರು ವ್ಯಕ್ತಿಗಳು ಬಿ.ಸಿ ರೋಡ್‌ನಿಂದ ಮಾಣಿ ಮಾರ್ಗದಲ್ಲಿ ಗಿರಾಕಿಗಳಿಗೆ ಮಾರಾಟ ಮಾಡಲು ಗಾಂಜಾ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸ್‍ ನಿರೀಕ್ಷಕ ಚೆಲುವರಾಜು ಸಿಬ್ಬಂದಿಯೊಂದಿಗೆ ಮೆಲ್ಕಾರ್‍ ಬಸ್ಸು ನಿಲ್ದಾಣದ ಬಳಿ ಕಾರನ್ನು ತಡೆದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.ಆರೋಪಿಗಳನ್ನು ಹಾಗೂ ಸೊತ್ತುಗಳನ್ನು ಬಂಟ್ವಾಳ ನಗರ ಠಾಣೆಗೆ ಹಸ್ತಾಂತರಿಸಲಾಗಿದೆ.

Also Read  ವೈದ್ಯರ ನಿರ್ಲಕ್ಷ್ಯಕ್ಕೆ ಯುವತಿ ಮೃತ್ಯು..!

 

error: Content is protected !!
Scroll to Top