ಮಂಗಳೂರು: ದೇರಳಕಟ್ಟೆ ಆಸ್ಪತ್ರೆಯಿಂದ ಹುಬ್ಬಳ್ಳಿಗೆ ಮೃತದೇಹವನ್ನು ಸಾಗಿಸಲು ನೆರವಾದ ಕರ್ನಾಟಕ ರಕ್ಷಣಾ ವೇದಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು.11: ಉತ್ತರಕನ್ನಡ ಮೂಲದ ವ್ಯಕ್ತಿಯೋರ್ವರು ಮಂಗಳೂರು ದೇರಳಕಟ್ಟೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತದೇಹವನ್ನು ಅವರ ಊರಿಗೆ ತಲುಪಿಸಲು ವ್ಯವಸ್ಥೆ ಮಾಡುವ ಮೂಲಕ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ದ.ಕ ಜಿಲ್ಲಾ ಸಮಿತಿ ಯವರು ಮಾನವೀಯತೆ ಮೆರೆದಿದ್ದಾರೆ.

 

 

ಹುಬ್ಬಳ್ಳಿ ಮೂಲದ ವಿಷ್ಣು ಎಂಬ ಯುವಕ ದೇರಳಕಟ್ಟೆ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಮೃತರು ಮೃತದೇಹವನ್ನು ಊರಿಗೆ ಸಾಗಿಸಲು ಹಣಕಾಸಿನ ಕೊರತೆ ಇದ್ದುದರಿಂದ ಈ ವಿಚಾರ ತಿಳಿದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣ ದ.ಕ. ಜಿಲ್ಲೆಯ ಪ್ರಮುಖರಾದ ಗಿರೀಶ್ ಶೇಟ್, ಮಹಮ್ಮದ್ ಹಾಜಿ ಕುಕ್ಕುವಳ್ಳಿ ಹಾಗೂ ಆಸಿಫ್ ಆಪತ್ಭಾಂದವ ಮೊದಲಾದವರು ಸೇರಿಕೊಂಡು ಮೃತದೇಹವನ್ನು ಅಂಬ್ಯುನ್ಸ್ ಮೂಲಕ ಹುಬ್ಬಳ್ಳಿಗೆ ಕೊಂಡೊಯ್ಯಲು ನೆರವಾದರು. ಇವರ ಈ ಮಾನವೀಯ ಸೇವೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Also Read  ಬೆಳಗಾವಿಯಲ್ಲಿ ಸಿದ್ದರಾಮಯ್ಯರ 50 ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಪ್ಲಾನ್..!

 

error: Content is protected !!
Scroll to Top