ಗಂಡಿಬಾಗಿಲು: ಎಸ್.ಕೆ.ಎಸ್.ಬಿ.ವಿ.ನೂತನ ಅಧ್ಯಕ್ಷರಾಗಿ ► ಮಹಮ್ಮದ್ ಫಝಲ್ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ,ಅ.4, ಗಂಡಿಬಾಗಿಲು ಹಿಮಾಯತುಲ್ ಇಸ್ಲಾಂ ಮದ್ರಸದ ವಿದ್ಯಾರ್ಥಿ ಸಂಘಟನೆ ಸಮಸ್ತ ಕೇರಳ ಸುನ್ನಿ ಬಾಲವೇದಿ (ಎಸ್.ಕೆ.ಎಸ್.ಬಿ.ವಿ.) ಇದರ 2017-18ನೇ ಸಾಲಿನ ನೂತನ ಅಧ್ಯಕ್ಷರಾಗಿ ಮಹಮ್ಮದ್ ಫಝಲ್, ಕಾರ್ಯದರ್ಶಿಯಾಗಿ ಅನ್ವರ್ ಹುಸೈನ್, ಆಯ್ಕೆಯಾಗಿದ್ದಾರೆ.


ಗಂಡಿಬಾಗಿಲು ಕುತುಬಿಯಾ ಜುಮಾ ಮಸೀದಿ ಖತೀಬ್ ಅನಸ್ ತಂಙಳ್ ಅಧ್ಯಕ್ಷತೆಯಲ್ಲಿ ಸದರ್ ಮುಅಲ್ಲಿಂ ಅಬ್ದುಲ್ ರಹಿಮಾನ್ ಅರ್ಶದಿ, ಮುಅಲ್ಲಿಂ ರಫೀಕ್ ಮುಸ್ಲಿಯಾರ್ ಉಪಸ್ಥಿತಿಯಲ್ಲಿ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು.

ಕೋಶಾಧಿಕಾರಿಯಾಗಿ ರಾಶಿದ್ . ಉಪಾಧ್ಯಕ್ಷರಾಗಿ ಅಹ್ಮದ್ ಅಫ್ಸಲ್, ಮಹಮ್ಮದ್ ಮುಸ್ತಫ , ಜೊತೆಕಾರ್ಯದರ್ಶಿಯಾಗಿ ಇಶಾಂ, ಝಾಹಿದ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ವಿ. ಸುಹೈಲ್, ಸಫ್ವಾನ್, ರಾಫಿ, ಸುಹೈಲ್, ಆದಿಲ್, ವಿ. ಫಾರೂಕ್, ಆದಂ, ಸಿನಾನ್, ರಝೀನ್, ಅನಸ್, ಮುಹಿಯುದ್ದೀನ್, ನಿಶಾನ್, ಕಾರ್ಯಕ್ರಮ ನಾಯಕರಾಗಿ ಮಜ್ಲಿಸುನ್ನೂರು ರಾಝಿ, ಝಾಹಿರ್, ಮದ್ರಸ ನಾಯಕರಾಗಿ ಫಾರಿಸ್, ಮುಸ್ತಾಕ್ ಹಸನ್ ಇವರುಗಳನ್ನು ಆಯ್ಕೆ ಮಾಡಲಾಯಿತು.

error: Content is protected !!
Scroll to Top