ಸುಳ್ಯದ ಖ್ಯಾತ ಚಿತ್ರಕಲಾ ಶಿಕ್ಷಕ ನಿಧನ

(ನ್ಯೂಸ್ ಕಡಬ) newskadaba.com ಸುಳ್ಯ . 11: ಸುಳ್ಯದ ಖ್ಯಾತ ಚಿತ್ರಕಲಾ ಶಿಕ್ಷಕ ಮಹಾಬಲ ಕುಳರವರು ಮರದಿಂದ ಬಿದ್ದು ಗಾಯಗೊಂಡು ವಿಧಿವಶರಾಗಿದ್ದಾರೆ.

 

ಮಂಗಳವಾರದಮದು ತಮ್ಮ ಮನೆಯ ಬಳಿಯಿದ್ದ ಮರದ ರೆಂಬೆ ಕಡಿಯುತ್ತಿದ್ದ ವೇಳೆ ಮರದಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಸುಳ್ಯ ತಾಲೂಕಿನ ಖ್ಯಾತ ಚಿತ್ರಕಲಾ ಶಿಕ್ಷಕ ಕುಳ ಅವರು ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗಿನ ವೇಳೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮಹಾಬಲ ಕುಳ ಅವರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಪಂಜ ಸರ್ಕಾರಿ ಕಾಲೇಜಿನಲ್ಲಿಪ್ರೌಢಶಾಲಾ ವಿಭಾಗದಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದ ಅವರು ಈ ಹಿಂದೆ ಬೆಳ್ಳಾರೆ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಿದ್ದರು.

Also Read  ಲಾರಿ ತಡೆದು ಹಣ ವಸೂಲಿ ಆರೋಪ ➤ ಎಎಸ್ಐ ಸಹಿತ ಇಬ್ಬರು ಪೊಲೀಸರ ಅಮಾನತು

 

error: Content is protected !!
Scroll to Top