(ನ್ಯೂಸ್ ಕಡಬ) newskadaba.com ಉಡುಪಿ ನ. 11: ಸರಕು ವಾಹನದಲ್ಲಿ ನಕಲಿ ದಾಖಲೆಗಳೊಂದಿಗೆ ಅಡಿಕೆ ಸರಕನ್ನು ಸಾಗಣೆ ಮಾಡುತ್ತಿದ್ದ ವೇಳೆ ವಾಣಿಜ್ಯ ತೆರಿಗೆ ಅಧಿಕಾರಿಗಳು ಪತ್ತೆ ಹಚ್ಚಿ ರೂ 53.10 ಲಕ್ಷ ದಂಡವನ್ನು ವಸೂಲಿ ಮಾಡಲಾಗಿದೆ.ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರು (ಜಾರಿ)-1, ಪಶ್ಚಿಮ ವಲಯ ಮಂಗಳೂರು ಇವರು 2020 ಮೇ 23ರಂದು ರಸ್ತೆ ಜಾಗೃತಿ ಕಾರ್ಯ ನಡೆಸುವ ಸಂದರ್ಭದಲ್ಲಿ ಅಂಪಾರು-ಕೊಲ್ಲೂರು ರಸ್ತೆಯ ವಂಡ್ಸೆ ಎಂಬ ಸ್ಥಳದಲ್ಲಿ ಸರಕು ವಾಹನವನ್ನು ತಡೆಹಿಡಿದು 380 ಚೀಲ ಅಡಿಕೆ ಸರಕನ್ನು (24700 ಕೆಜಿ) ವಾಹನದೊಂದಿಗೆ ವಶಪಡಿಸಿಕೊಂಡು ತನಿಖೆ ನಡೆಸಿರುತ್ತಾರೆ.
ತನಿಖೆಯ ನಂತರ ಸರಕಿನ ಸಾಗಣೆದಾರರು ಕರ್ನಾಟಕದಲ್ಲಿ ಅಡಿಕೆ ಸರಕನ್ನು ಪಡೆದು ಅದನ್ನು ಕೇರಳದ ವರ್ತಕರಿಗೆ ಸಂಬಂಧಿಸಿದ ನಕಲಿ ದಾಖಲಿಗಳೊಂದಿಗೆ ಸಾಗಣೆ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ 2017 ರ ಪ್ರಕರಣ 129(1)(b) ರಡಿಯಲ್ಲಿ ಆದೇಶ ಹೊರಡಿಸಿ ಸಾಗಣೆದಾರರ ಮೆ:ಯೂನಿಯನ್ ಕಾರ್ಗೋ ಮೂವರ್ಸ್, ಪುತ್ತೂರು ಇವರಿಂದ ಒಟ್ಟು ತೆರಿಗೆ ಮತ್ತು ದಂಡ ರೂ. 53,10,500.00ಗಳನ್ನು ವಸೂಲಿ ಮಾಡಲಾಗಿರುತ್ತದೆ ಎಂದು ಉದಯಶಂಕರ್ ವಾಣಿಜ್ಯ ತೆರಿಗೆ ಜಂಟಿ ಆಯುಕ್ತರು (ಜಾರಿ), ಪಶ್ಚಿಮ ವಲಯ, ಮಂಗಳೂರು ಇವರು ಮಾಹಿತಿ ನೀಡಿದ್ದಾರೆ.