ಮಣಿಪಾಲ: ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ ಭೂಪ ➤ ಆರೋಪಿ ಪೊಲೀಸರ ವಶಕ್ಕೆ

(ನ್ಯೂಸ್ ಕಡಬ) newskadaba.com ಮಣಿಪಾಲ, .11: ಮಣಿಪಾಲದಲ್ಲಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಹಣ ಹಾಗೂ ದಾಖಲೆ ಪತ್ರಗಳನ್ನು ಪಡೆದು ವಂಚಿಸಿಕೊಂಡಿರುವ ಘಟನೆ ನಡೆದಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಗಣೇಶ್ ನಾಯ್ಕ್ ಎಂದು ಗುರುತಿಸಲಾಗಿದೆ.

 

 

ಪ್ರಕರಣದಲ್ಲಿ ಆರೋಪಿತನು ತಾನು ಕೊಂಕಣ ರೈಲ್ವೆ ಇಲಾಖೆಯಲ್ಲಿ ಟಿ ಸಿ ಆಗಿರುವುದಾಗಿ ಹೇಳಿ  ಉದ್ಯೋಗ ಕೊಡುವುದಾಗಿ  ವ್ಯಕ್ತಿಯನ್ನು  ನಂಬಿಸಿ 20,000 ಹಣ ಹಾಗೂ ದಾಖಲೆ ಪತ್ರಗಳನ್ನು ತೆಗೆದುಕೊಂಡು ವಂಚಿಸಿದ್ದಾನೆ. ಅಲ್ಲದೇ ಮತ್ತೊಬ್ಬ ಯುವತಿಯಿಂದ ಹಣ ಪಡೆದು ನಕಲಿ ನೇಮಕಾತಿ ಪತ್ರವನ್ನು ನೀಡಿ, ಉದ್ಯೋಗ ಕೊಡಿಸದೆ ವಂಚಿಸಿದ್ದಾನೆ. ಈ ಬಗ್ಗೆ ಮೋಸಕ್ಕೊಳಗಾದವರು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

Also Read  “ಶ್ರೀ ಟೆಕ್ನಾಲಜೀಸ್‌” ಪ್ರಸ್ತುತಪಡಿಸುತ್ತಿದೆ 4ನೇ ವರ್ಷದ ಲಕ್ಕೀ ಸ್ಕೀಮ್; ಕೇವಲ 1 ಸಾವಿರ ಪಾವತಿಸಿ ಸ್ಕೂಟರ್, ಚಿನ್ನ ಮತ್ತು ಫರ್ನಿಚರ್ ನಿಮ್ಮದಾಗಿಸಿ

 

 

error: Content is protected !!
Scroll to Top