ಶ್ರೀನಗರ: ಶೋಫಿಯಾನ್‍ನಲ್ಲಿ ಎನ್ ಕೌಂಟರ್ ➤ ಇಬ್ಬರು ಉಗ್ರರ ಹತ್ಯೆ

(ನ್ಯೂಸ್ ಕಡಬ) newskadaba.com ಶ್ರೀನಗರ.10: ದಕ್ಷಿಣ ಕಾಶ್ಮೀರದ ಸೋಪಿಯಾನ್‌ ಜಿಲ್ಲೆಯ ಕುಟ್ಪೊರಾ ಪ್ರದೇಶದಲ್ಲಿ ಇಂದು ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಯು ಉಗ್ರರಿಬ್ಬರನ್ನು  ಹೊಡೆದುರುಳಿಸಿದ್ದಾರೆ.

ಜಮ್ಮು-ಕಾಶ್ಮೀರದ ಪೊಲೀಸರು ನಿಖರ ಮಾಹಿತಿ ಮೇರೆಗೆ ಸೇನೆಯ 34-ರಾಷ್ಟ್ರೀಯ ರೈಫಲ್ಸ್‌ ಮತ್ತು ಇಂದು ಕುಟ್ಪೊರಾ ಪ್ರದೇಶದಲ್ಲಿ ಜಂಟಿಯಾಗಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.  ಈ ವೇಳೆ ಉಗ್ರರು ಭದ್ರತಾ ಸಿಬ್ಬಂದಿ ಮೇಲೆ ಮೊದಲು ಗುಂಡು ಹಾರಿಸಿದರು. ಈ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದು, ಇವರು ಯಾವ ಸಂಘಟನೆಗೆ ಸೇರಿದವರು ಎಂಬುದರ ಬಗ್ಗೆ ಮಾಹಿತಿ ಲಭ್ಯವಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಸೋಪಿಯಾನ್‌ ಜಿಲ್ಲೆಯಲ್ಲಿ ಅಂರ್ತಜಾಲ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

Also Read  ಕೈ ಅತೃಪ್ತನಾಯಕರಿಗೆ ಬಹಿರಂಗವಾಗಿ ಬಿಜೆಪಿಗೆ ಆಹ್ವಾನ➤ರಾಜ್ಯ ಬಿಜೆಪಿ ಉಸ್ತುವಾರಿ ಸಚಿವರ ವಿರುದ್ದ ರಾಜ್ಯ ಕಾಂಗ್ರೆಸ್ ಆಕ್ರೋಶ

 

 

error: Content is protected !!
Scroll to Top