ಕಾರ್ಕಳ: ಕಂಠಸಿರಿಯಲ್ಲಿ ಕೊರಗಜ್ಜನ ಹಾಡು ಹಾಡಿ ಸೂಪರ್ ಹಿಟ್ ಆದ ಪುಟ್ಟ ಬಾಲಕ

(ನ್ಯೂಸ್ ಕಡಬ) newskadaba.com ಕಾರ್ಕಳ, .10: ಕೊರಗಜ್ಜ ದೈವವನ್ನು ಸ್ತುತಿಸುವ ಕಂಠಸಿರಿಯಲ್ಲಿ ಹಾಡು ಹಾಡಿ ಸೂಪರ್ ಹಿಟ್ ಎಂದು ಹೆಸರು ಗಳಿಸಿದ ಕಾರ್ಕಳ ಹಿರ್ಗಾನದ ಬಾಲಕ ಕಾರ್ತಿಕ್ ರವರ ಹಾಡು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ಪುಟ್ಟ ಬಾಲಕನಿಗೆ ಜಾರಿಕಟ್ಟೆ ಶ್ರೀ ಕೊರಗಜ್ಜ ಕೊರಗ ಪಂಜುರ್ಲಿ ದೈವಸ್ಥಾನದ ವತಿಯಿಂದ ಶ್ರೀ ಕ್ಷೇತ್ರದಲ್ಲಿ ಸನ್ಮಾನ ಕಾರ್ಯಕ್ರಮವು ನಡೆಯಿತು.

 

 

ಈತನ ಹಾಡಿನ ವೆಬ್ ಸೈಟ್ ನ್ನು ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಯವರು ಬಿಡುಗಡೆಗೊಳಿಸಿದರು. ಶ್ರೀ ಕ್ಷೇತ್ರದ ಧರ್ಮದರ್ಶಿ ದಿವಾಕರ ಪೂಜಾರಿ ದಂಪತಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕ್ಷೇತ್ರದ ಧೀರಜ್ ದಿವಾಕರ ಪೂಜಾರಿ, ದೈವಾರಾಕ ಸಂಘದ ಅಶೋಕ್ ಶೆಟ್ಟಿ, ಗಾಯಾಕಿ ಚೈತ್ರ ಕಲ್ಲಡ್ಕ, ಡಮರುಗ ತಂಡದ ಜಿ.ಎಸ್.ಗುರುಪು, ನಿರೂಪಕ ಮಧುರಾಜ್ ಗುರುಪುರ, ಸುಶಾಂತ್ ಚಕ್ರಪಾಣಿ, ವೆಬ್ ಸೈಟ್ ನ ಯಶು ಐಕಳ, ಕಾರ್ತಿಕ್ ನ ತಂದೆ ಪೂವಪ್ಪ ಹಾಗೂ ತಾಯಿ ಲೋಲಾಕ್ಷಿ, ಶರತ್ ಶೆಟ್ಟಿ ಕಿನ್ನಿಗೋಳಿ ಮತ್ತಿತರರು ಉಪಸ್ಥಿತರಿದ್ದರು.

Also Read  Breaking news ದೇರಳಕಟ್ಟೆ: ಅಟೊ ಮೊಬೈಲ್ ಅಂಗಡಿಗೆ ಬೆಂಕಿ

 

 

error: Content is protected !!
Scroll to Top