ಪಂಜ: ರಸ್ತೆ ಕಾಂಕ್ರೀಟಿಕರಣ ➤ ಶಾಸಕ ಎಸ್.ಅಂಗಾರ ದೀಪ ಬೆಳಗಿಸಿ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಪಂಜ, .10: ಕಳೆದ ದಿನ ಪಂಜ ಗ್ರಾಮ ಪಂಚಾಯತ್ ವಾಣಿಜ್ಯ ಸಂಕೀರ್ಣ ಮತ್ತು ಬಸ್ ತಂಗುದಾಣಕ್ಕೆ ಹೋಗುವ ರಸ್ತೆಗೆ ಕಾಂಕ್ರೀಟಿಕರಣ ಶಾಶ್ವತ ಕಾಮಗಾರಿ ಪೂರ್ಣಗೊಂಡಿದ್ದು, ಅದರ ಉದ್ಘಾಟನಾ ಕಾರ್ಯಕ್ರಮವನ್ನು ಶಾಸಕ ಎಸ್.ಅಂಗಾರ ರವರು ದೀಪ ಬೆಳಗಿಸುವುದರ ಮೂಲಕ ಹಾಗೂ ತೆಂಗಿನಕಾಯಿ ಒಡೆದು ಉದ್ಘಾಟಿಸಿದರು.

 

 

ಕಾಂಕ್ರೀಟಿಕರಣ ಶಾಶ್ವತ ಕಾಮಗಾರಿ ಗೆ ಶಾಸಕ ಎಸ್.ಅಂಗಾರ ಅವರು 10 ಲಕ್ಷ.ರೂ. ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅವರು 5.ಲಕ್ಷ ರೂ. ಅನುದಾನ ಒದಗಿಸಿದ್ದರು. ಇಲ್ಲಿ 4.90 ಲಕ್ಷ.ರೂ. ವೆಚ್ಚದಲ್ಲಿ ರಸ್ತೆ ಬದಿ ತಡೆ ಗೋಡೆ ಮತ್ತು ಇಂಟರ್ ಲಾಕ್, 4090 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಯಲ್ಲಿ ಕೂಬ್ರಿಜ್, 2 ಲಕ್ಷ ರೂ. ವೆಚ್ಚದಲ್ಲಿ ಹೂವಿನ ಮಾರುಕಟ್ಟೆ ಕಾಮಗಾರಿಯು ಪಂಜ ಗ್ರಾಮ ಪಂ. ಅನುದಾನದಲ್ಲಿ ನಿರ್ಮಾಣವಾಗಿದೆ.

Also Read  ಬಂಟ್ವಾಳ: ಪಿಕಪ್ ಮತ್ತು ಬೈಕ್ ನಡುವೆ ಭೀಕರ ಅಪಘಾತ

 

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಎಸ್ ಎನ್ ಮನ್ಮಥ, ಬಾ.ಜ.ಪಾ.ಜಿಲ್ಲಾ ಸಮಿತಿ ಉಪಾಧ್ಯಕ್ಷ ವೆಂಕಟ್ ವಳಲಂಬೆ, ಪಂಜ ಗ್ರಾಮ ಪಂಚಾಯತ್ ನಿಕಟಪೂರ್ವಾಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್ಲು, ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಲಿಗೋಧರ ಆಚಾರ್ಯ ನಾಯರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಪ್ಪ ಗೌಡ  ಚಿದ್ಗಲ್ಲು ಸ್ವಾಗತಿಸಿದರು. ಲಿಗೋಧರ ಆಚಾರ್ಯ ರವರು ವಂದಿಸಿದರು.

Also Read  ಪುತ್ತೂರು: ನ್ಯಾಯವಾದಿ ಶ್ಯಾಮಲ ಹೆಗ್ಡೆ ಹೃದಯಾಘಾತದಿಂದ ನಿಧನ

 

 

 

error: Content is protected !!
Scroll to Top