ಪ್ರಿ ವೆಡ್ಡಿಂಗ್ ಫೋಟೋಶೂಟ್ ವೇಳೆ ನೀರುಪಾಲಾದ ನವ ಜೋಡಿ.!

(ನ್ಯೂಸ್ ಕಡಬ) newskadaba.com ಮೈಸೂರು . 10: ಪ್ರೀ ವೆಡ್ಡಿಂಗ್ ಪೋಟೋ ಶೂಟ್ ಮಾಡಿಸಲು ಹೋದ ಇಬ್ಬರು ನವ ಜೋಡಿಗಳು ಕಾವೇರಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ದುರ್ಘಟನೆ ಮೈಸೂರಿನಲ್ಲಿ ಕಳೆದ ದಿನ ನಡೆದಿದೆ.‌ ತಲಕಾಡಿನ ಮುಡುಕುತೊರೆ ಗ್ರಾಮದ ಬಳಿಯ ಕಾವೇರಿ ನದಿಯಲ್ಲಿ ತೆಪ್ಪದ ಮೇಲೆ ನಿಂತು ಪೋಟೋ ಶೂಟ್ ಮಾಡುತ್ತಿದ್ದಾಗ, ಆಯತಪ್ಪಿ ನದಿಗೆ ಬಿದ್ದ ನವಜೋಡಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಚಂದ್ರ ಹಾಗೂ ಶಶಿಕಲಾ ಸಾವನ್ನಪ್ಪಿದವರು. ಕ್ಯಾತಮಾರನಹಳ್ಳಿ ನಿವಾಸಿಗಳಾದ ಚಂದ್ರು ಹಾಗೂ ಶಶಿಕಲಾ ಇದೇ ನವೆಂಬರ್ 22 ರಂದು ಇವರ ಶುಭವಿವಾಹ ನಿಶ್ಚಯವಾಗಿತ್ತು. ಚಂದ್ರು ಹಾಗೂ ಶಶಿಕಲಾ, ತನ್ನ ಮೂರು ಸ್ನೇಹಿತರು ಹಾಗೂ ಓರ್ವ ಪೋಟೋ ಗ್ರಾಫರ್ ಜೊತೆ ಟಿ.ನರಸೀಪುರದ ತಲಕಾಡಿಗೆ ಆಗಮಿಸಿದ್ದರು. ಈ ವೇಳೆ ನವಜೋಡಿಗಳು ಕಾವೇರಿ ನದಿ ತೀರದಲ್ಲಿ ತೆಪ್ಪದ ಮೇಲೆ ಕುಳಿತು ಪೋಟೋ ತೆಗೆಸಿಕೊಳ್ಳಲು‌ ಮುಂದಾಗಿದ್ದಾರೆ. ಈ ವೇಳೆ ತೆಪ್ಪದಲ್ಲಿ ನಾವಿಕ ಇರದ ಕಾರಣ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ತೆಪ್ಪ ಮಗುಚಿದ್ದು, ಚಂದ್ರು ಮತ್ತು‌ ಶಶಿಕಲಾಗೆ ಈಜು ಬಾರದ ಕಾರಣ ನದಿಯಲ್ಲೆ ಕೊಚ್ಚಿಹೋದರು. ಅಗ್ನಿಶಾಮಕ ಸಿಬ್ಬಂದಿ ಜೊತೆ ನುರಿತ ಈಜುಗಾರರು ಮೃತದೇಹಗಳನ್ನ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.ಈ ಸಂಬಂಧ ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  DCFವೆಂಕಟೇಶ್ ಮನೆ ಮೇಲೆ‌ ಲೋಕಾಯುಕ್ತ ದಾಳಿ ..  ➤ಕೆಜಿಗಟ್ಟಲೆ ಚಿನ್ನ-ಬೆಳ್ಳಿ ಪತ್ತೆ

error: Content is protected !!
Scroll to Top