ನೇತ್ರಾವತಿಗೆ ಹಾರಿದ ಪುತ್ತೂರು ಮೂಲದ ಯುವಕನ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಪಾಣೆಮಂಗಳೂರು, ನ.09:  ಕಳೆದ ದಿನ ನ.08 ರಂದು ಪಾಣೆಮಂಗಳೂರು ಸೇತುವೆಯ ಬಳಿ ಯುವನೋರ್ವ ಆತ್ಮಹತ್ಯೆಗೆ ಶರಣಾಗಿದ್ದ. ಇಂದು ಆತನ ಮೃತದೇಹ ಪಾಣೆಮಂಗಳೂರು ಸೇತುವೆಯ ತಳಭಾಗದಲ್ಲಿ ಪತ್ತೆಯಾಗಿದೆ. ನದಿಗೆ ಹಾರಿದ್ದಯುವಕ ಪುತ್ತೂರು ತಾಲೂಕಿನ ಬಲ್ನಾಡು ಕಾಂತಿಲ ನಿವಾಸಿ ಸುಚೇತನ್ (27)ಎಂದು ಗುರುತಿಸಲಾಗಿದೆ.

 

ಈತ ಕಳೆದ ದಿನ ನೇತ್ರಾವತಿ ಸೇತುವೆ ಬಳಿ ಬ್ಯಾಗ್ ಇರಿಸಿ ನದಿಗೆ ಹಾರಿದ್ದನ್ನ ಕಾರಿನಲ್ಲಿ ತೆರಳುತ್ತಿದ್ದವರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಯುವಕ ಇರಿಸಿದ  ಬ್ಯಾಗ್ ನಲ್ಲಿ ಆತನ ಆಧಾರ್ ಕಾರ್ಡ್, ವೋಟಾರ್ ಐಡಿ, ಸಿಕ್ಕಿತ್ತು ಈ ಮೂಲಕ ಯುವಕನ ಬಗ್ಗೆ ಮಾಹಿತಿ ಕಲೆ ಹಾಕಿ ಆತನ ಮನೆಯವರಿಗೆ ಮಾಹಿತಿ ರವಾನಿಸಿದ್ದಾರೆ. ಕಳೆದ ದಿನದಿಂದಲೇ ನುರಿತ ಈಜುಗಾರರ ತಂಡ, ಬಂಟ್ವಾಳ ಅಗ್ನಿಶಾಮಕ ದಳದವರು ಬೋಟಿನಲ್ಲಿ ಹುಡುಕಾಡಿದಾಗ ಮೃತದೇಹಪತ್ತೆಯಾಗಿದೆ. ಸ್ಥಳಕ್ಕೆ ಬಂಟ್ವಾಳ ನಗರ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.

Also Read  ಎಸ್ಡಿಪಿಐ ಅಭ್ಯರ್ಥಿ ಶಾಫಿ ಬೆಳ್ಳಾರೆ ನಾಮಪತ್ರ ಸಲ್ಲಿಕೆ

 

error: Content is protected !!
Scroll to Top