ಟಾಲಿವುಡ್ ನಟ ಚಿರಂಜೀವಿಗೆ ಕೊರೊನಾ ಪಾಸಿಟಿವ್

(ನ್ಯೂಸ್ ಕಡಬ) newskadaba.com ಹೈದರಾಬಾದ್ . 09: ಟಾಲಿವುಡ್ ಖ್ಯಾತ ನಟ ಚಿರಂಜೀವಿ ಕೊನಿಡೆಲಾ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಕುರಿತು ಟ್ವೀಟ್ ಮಾಡುವ ಮೂಲಕ ಅವರು ಖಚಿತಪಡಿಸಿದ್ದು, ಆಚಾರ್ಯ ಸಿನಿಮಾ ಚಿತ್ರೀಕರಣ ಆರಂಭಿಸುವುದಕ್ಕೂ ಮುನ್ನ ಕೊರೊನಾ ಟೆಸ್ಟ್ ಗೆ ಒಳಗಾದೆ. ಈ ವೇಳೆ ಪಾಸಿಟಿವ್ ವರದಿ ಬಂದಿದೆ.

 

ನನಗೆ ಯಾವುದೇ ರೀತಿಯ ರೋಗ ಲಕ್ಷಣಗಳಿಲ್ಲ. ಹೀಗಾಗಿ ಮನೆಯಲ್ಲೇ ಕ್ವಾರಂಟೈನ್ ಆಗಿದ್ದೇನೆ ಎಂದು ತಿಳಿಸಿದ್ದಾರೆ.ಇತ್ತೀಚೆಗೆ ಕಳೆದ 5 ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದವರು ಕೊರೊನಾ ಪರೀಕ್ಷೆಗೆ ಒಳಗಾಗಬೇಕೆಂದು ವಿನಂತಿಸುತ್ತೇನೆ. ನನ್ನ ಆರೋಗ್ಯದ ಸ್ಥಿತಿಯ ಬಗ್ಗೆ ನಿಮಗೆ ಶೀಘ್ರವೇ ಅಪ್‍ಡೇಟ್ ನೀಡುತ್ತೇನೆ ಎಂದು ಬರೆದುಕೊಂಡಿದ್ದಾರೆ. ಲೆಟರ್ ಹೆಡ್ ಇರುವ ಪತ್ರವನ್ನು ಹಂಚಿಕೊಳ್ಳುವ ಮೂಲಕ ಚಿರಂಜೀವಿ ಈ ಕುರಿತು ಖಚಿತಪಡಿಸಿದ್ದಾರೆ.

Also Read  ದಕ್ಷಿಣ ಕನ್ನಡದಲ್ಲಿ ಇಂದು ಕೊರೋನಾ ಸೋಂಕಿಗೆ 9 ಮಂದಿ ಬಲಿ ➤ 806 ಮಂದಿಗೆ ಪಾಸಿಟಿವ್, 858 ಮಂದಿ ಬಲಿ

 

 

error: Content is protected !!
Scroll to Top