ಕುಕ್ಕೆ ಸುಬ್ರಹ್ಮಣ್ಯ: ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಶಾಸಕ ಎಸ್. ಅಂಗಾರ ಅಧಿಕಾರ ಸ್ವೀಕಾರ

(ನ್ಯೂಸ್ ಕಡಬ) newskadaba.com ಕುಕ್ಕೆ ಸುಬ್ರಹ್ಮಣ್ಯ, .9: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಸರಕಾರದಿಂದ ನೇಮಕಗೊಂಡಿರುವ ಶಾಸಕ ಎಸ್. ಅಂಗಾರರವರು ಹಾಗೂ ಅಭಿವೃದ್ಧಿ ಸಮಿತಿಯ ಸದಸ್ಯರುಗಳು ಇಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಡತಕ್ಕೆ ಸಹಿ ಹಾಕುವ ಮುಖಾಂತರ ಅಧಿಕಾರ ಸ್ವೀಕರಿಸಿದರು.

 

 

ಮೊದಲಾಗಿ ದೇವಸ್ಥಾನದ ಕಛೇರಿಗೆ ಆಗಮಿಸಿದ ಅಭಿವೃದ್ಧಿ ಸಮಿತಿಯ ಸದಸ್ಯರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಬಳಿಕ ಶಾಸಕ ಎಸ್ ಅಂಗಾರರವರಿಗೆ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್ ರವರು ಶಾಲು ಹೊದಿಸಿ ಗೌರವಿಸಿದರು. ಸಮಿತಿ ಸದಸ್ಯರುಗಳಾದ ಮೋಹನಾ ರಾಮ್ ಸುಳ್ಳಿ, ಪಿ.ಜಿ.ಎಸ್ ಪ್ರಸಾದ್, ಟಿ. ವನಜಾ ವಿ ಭಟ್ , ಮನೋಹರ ರೈ, ಪ್ರಸನ್ನ ದರ್ಬೆ ಕಡತಕ್ಕೆ ಸಹಿ ಹಾಕಿ ಜವಾಬ್ದಾರಿ ವಹಿಸಿಕೊಂಡರು. ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಬಿಜೆಪಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಮಾಜಿ ಜಿಲ್ಲಾ ಪಂ.ಅಧ್ಯಕ್ಷ ವೆಂಕಟ್ ದಂಬೆಕೋಡಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೆಂಕಟ್ ಒಳಲಂಬೆ, ಸುಬ್ರಹ್ಮಣ್ಯ ಗ್ರಾಮ ಬಿಜೆಪಿಯ ಅಧ್ಯಕ್ಷ ದಿನೇಶ್ ಸಂಪ್ಯಾಡಿ, ಅಚ್ಚುತ ಗೌಡ, ಭವಾನಿಶಂಕರ ಪೂಂಬಾಡಿ ಶ್ರೀಕುಮಾರ್, ಚಿದಾನಂದ ಕಂದಡ್ಕ, ರಾಜೇಶ್ ಎನ್ ಎಸ್ ಅಶೋಕ್ ಆಚಾರ್ಯ, ಭಾರತಿ ದಿನೇಶ್, ಪ್ರಶಾಂತ್ ಮಾಣಿಲ ಮತ್ತಿತರರು ಉಪಸ್ಥಿತರಿದ್ದರು.

Also Read  ರಾಜ್ಯದಲ್ಲಿ ಭಾರೀ ಮಳೆ...! ಇಂಧನ ಇಲಾಖೆಗೆ 96.61 ಕೋಟಿ ರೂ. ನಷ್ಟ

 

 

error: Content is protected !!
Scroll to Top