ಕೆದಿಲ : “ಬಲೆ ತುಳು ಲಿಪಿ ಕಲ್ಪುಗ” ಕಾರ್ಯಗಾರದ ಸಮರೋಪ

(ನ್ಯೂಸ್ ಕಡಬ) newskadaba.com ಬಂಟ್ವಾಳ ನ. 09: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಜೈ ತುಲುನಾಡ್ (ರಿ.), ಶ್ರೀ ದೇವಿ ಭಜನಾ ಮಂಡಳಿ ಗಾಂಧಿನಗರ ಕೆದಿಲ ಮತ್ತು ಶ್ರೀ ದೇವಿ ಸ್ಪೋರ್ಟ್ಸ್ ಕ್ಲಬ್ ಗಾಂಧಿನಗರ ಕೆದಿಲ ಇವರ ಸಂಯುಕ್ತ ಆಶ್ರಯದಲ್ಲಿ ಬಂಟ್ವಾಳ ತಾಲೂಕಿನ ಗಾಂಧಿನಗರ ಕೆದಿಲ ಶ್ರೀ ದೇವಿ ಸಭಾಭವನದಲ್ಲಿ ದಿನಾಂಕ 08-11-2020 ಆದಿತ್ಯವಾರ ಬೆಳಿಗ್ಗೆ 10:00 ಗಂಟೆಗೆ ಸರಿಯಾಗಿ “ಬಲೆ ತುಳು ಲಿಪಿ ಕಲ್ಪುಗ” ಕಾರ್ಯಗಾರದ ಉದ್ಘಾಟನಾ ಕಾರ್ಯಕ್ರಮವು ನಡೆಯಿತು.

 

ಕಾರ್ಯಕ್ರಮವನ್ನು ಶ್ರೀದೇವಿ ಭಜನಾ ಮಂಡಳಿಯ ಕೋಶಾಧಿಕಾರಿ ಚೆನ್ನಪ್ಪ ಗೌಡ ಕುದುಮಾನ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಶ್ರೀ ದೇವಿ ಭಜನಾ ಮಂಡಳಿಯ ಅಧ್ಯಕ್ಷರಾದ ಜಿನ್ನಪ್ಪ ಗೌಡ ಕಂಪ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ದಯಾನಂದ ಜಿ ಕತ್ತಲ್‌ಸಾರ್‌ರವರು ಮಾತನಾಡಿ “ತುಳು ಲಿಪಿಯನ್ನು ತುಳುನಾಡಿನಾದ್ಯಂತ ಮತ್ತೊಮ್ಮೆ ಬಳಕೆಗೆ ತರಲು ಇಂತಹ ಕಾರ್ಯಕ್ರಮಗಳು ಪ್ರತಿ ಊರಿನಲ್ಲಿ ನಡೆಯಬೇಕು” ಎಂದರು. ತುಳು ಲಿಪಿ ಶಿಕ್ಷಕರಾದ ಜಗದೀಶ ಗೌಡ ಕಲ್ಕಳ ರವರು ತುಳು ಲಿಪಿಯಲ್ಲಿ ಬರೆಯುವ ಮೂಲಕ ಕಾರ್ಯಗಾರಕ್ಕೆ ಚಾಲನೆ ನೀಡಿದರು.

Also Read  ಅಮೆರಿಕದಲ್ಲಿ ಭೀಕರವಾಗಿ ಹತ್ಯೆಯಾದ ಭಾರತೀಯ ಮೂಲದ ಮನೋವೈದ್ಯ ► ಆರೋಪಿಯ ಸೆರೆ

 

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮೀರಾವನ ಕೃಷ್ಣ ಭಟ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ದಿನೇಶ್ ರೈ ಕಡಬ, ಜೈ ತುಲುನಾಡ್ (ರಿ) ಸಂಘಟನೆಯ ಅಧ್ಯಕ್ಷರಾದ ಸುದರ್ಶನ್ ಸುರತ್ಕಲ್, ಮಿಥುನ್ ಪೂಜಾರಿ ಕೆರೆಕೋಡಿ, ಮಾಜಿ ಸೈನಿಕರಾದ ಜನಾರ್ಧನ ಕುಲಾಲ್ ಗಾಣದ ಕೊಟ್ಯ, ತುಳು ಲಿಪಿ ಶಿಕ್ಷಕರಾದ ಪೂರ್ಣಿಮಾ ಬಂಟ್ವಾಳ ಮತ್ತು ಜನಾರ್ಧನ ಪೆರ್ನೆ ಉಪಸ್ಥಿತರಿದ್ದರು. ಉಮೇಶ್ ಗಾಂಧಿನಗರ ಸ್ವಾಗತಿಸಿ ಜೈ ತುಲುನಾಡ್ (ರಿ) ಇದರ ಬೆಂಗಳೂರು ಘಟಕದ ಅಧ್ಯಕ್ಷರಾದ ಜಯಪ್ರಸಾದ್ ತುಲುನಾಡ್ ಧನ್ಯವಾದಗೈದರು. ಗೀತಾ ಜಯಪ್ರಸಾದ್‌ರವರು ಕಾರ್ಯಕ್ರಮವನ್ನು ನಿರೂಪಿಸಿದರು.

Also Read  16 ನೇ ಹಣಕಾಸು ಆಯೋಗಕ್ಕೆ ಸಿಎಂ ಸಿದ್ದರಾಮಯ್ಯ ಮನವಿ

 

 

 

 

error: Content is protected !!
Scroll to Top