ಹಿಂ.ಜಾ.ವೆ ಯಿಂದ ಮಾಹಿತಿ ➤ ಅಕ್ರಮ ಕಸಾಯಿಖಾನೆಗೆ ಪೋಲಿಸರ ದಾಳಿ ,ಆರೋಪಿಗಳು ಪರಾರಿ.!

(ನ್ಯೂಸ್ ಕಡಬ) newskadaba.com ಕೆದಿಲ . 09: ಹಿಂದೂ ಜಾಗರಣ ವೇದಿಕೆಯ ಮಾಹಿತಿಗೆ ಸ್ಪಂದಿಸಿದ ಪುತ್ತೂರು ನಗರ ಪೊಲೀಸರ ತಂಡ ಕೆದಿಲದಲ್ಲಿ ನಡೆಯುತ್ತಿದ್ದ ಅಕ್ರಮ ಕಸಾಯಖಾನೆಗೆ ದಾಳಿ ನಡೆಸಿದ್ದಾರೆ. ಈ ವೇಳೆ ಮೂರು ಹೋರಿ ಕರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ದಾಳಿ ವೇಳೆ ಆರೋಪಿಗಳು ಪರಾರಿಯಾಗಿದ್ದಾರೆ.

 

ಪರಾರಿಯಾಗಿರುವ ಆರೋಪಿಗಳ ವಿರುದ್ಧ ಕ್ರಮ ಕೈಗೊಂಡು, ಕೂಡಲೇ ಬಂಧಿಸುವಂತೆ ಹಿಂದೂ ಜಾಗರಣ ವೇದಿಕೆ ತಾಲೂಕು ಅಧ್ಯಕ್ಷ ಗಣೇಶ್ ಕುಲಾಲ್ ಕೆದಿಲ ಮನವಿ ಮಾಡಿ ಒತ್ತಾಯಿಸಿದ್ದಾರೆ. ಕೆದಿಲ ಗ್ರಾಮದ ಹಲವೆಡೆ ಎಗ್ಗಿಲ್ಲದೆ ಅಕ್ರಮ ಗೋಸಾಗಾಟ ನಡೆಯುತ್ತಲೇಯಿದೆ. ಇನ್ನು. ಈಗಾಗಲೇ ಅದೆಷ್ಟೋ ಭಾರಿ, ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಇಂತಹ ಕೃತ್ಯಗಳನ್ನು ನಡೆಸುವವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.ಆರೋಪಿಗಳು ಪತ್ತೆಯಾದರೂ ಜಾಮೀನು ಪಡೆದುಕೊಂಡು ಮತ್ತೇ ಅದೇ ಕಸುಬಿನಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಎಂದು ಕಾರ್ಯಕರ್ತರು ತಮ್ಮ ಅಳಲು ತೊಡಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಗೋ ಕಳ್ಳರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ್ದಾರೆ.

Also Read  ’ಒನ್ ನೇಷನ್, ಒನ್ ಎಲೆಕ್ಷನ್’ ಶೀಘ್ರದಲ್ಲೇ ಜಾರಿ- ಪ್ರಧಾನಿ ಮೋದಿ ಘೋಷಣೆ

 

 

 

error: Content is protected !!
Scroll to Top