ನಟಿ ಉಮಾಶ್ರೀ ಮನೆಯಲ್ಲಿ ಕಳವು ಪ್ರಕರಣ ➤ ಇಬ್ಬರ ಆರೋಪಿಗಳ ಅರೆಸ್ಟ್

(ನ್ಯೂಸ್ ಕಡಬ) newskadaba.com ಬಾಗಲಕೋಟೆ.9: ನಟಿ, ಮಾಜಿ ಸಚಿವೆ ಉಮಾಶ್ರೀ ಅವರ ಮನೆಯಲ್ಲಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಜಮಖಂಡಿಯ ಯಲ್ಲಪ್ಪ ಗಡ್ಡಿ ಹಾಗೂ ಮುಧೋಳದ ದುರ್ಗಪ್ಪ ವಾಲ್ಮೀಕಿ ಎಂದು ಗುರುತಿಸಲಾಗಿದೆ.

 

 

ಬಾಗಲಕೋಟೆಯ ರಬಕವಿಯ ವಿದ್ಯಾನಗರದಲ್ಲಿರುವ ಉಮಾಶ್ರೀಯವರ ಮನೆಯಲ್ಲಿ ನವೆಂಬರ್ 2 ರಂದು ಕಳ್ಳತನವಾಗಿದ್ದು, ಮನೆಯಲ್ಲಿದ್ದ 2 ಲಕ್ಷ ರೂಪಾಯಿ ನಗದು ಎಗರಿಸಿ ಪರಾರಿಯಾಗಿದ್ದರು. ಈ ಬಗ್ಗೆ ತೇರದಾಳ ಪೊಲೀಸ್ ಠಾಣೆಗೆ ಉಮಾಶ್ರೀ ಅವರು ದೂರು ನೀಡಿದ್ದರು. ಕಳ್ಳತನವಾದ ಸ್ಥಳಕ್ಕೆ ಸಿಪಿಐ ಕರುಣೇಸಿಗೌಡ ಮತ್ತು ಪಿಎಸ್‌ಐ ವಿಜಯಕುಮಾರ ಕಾಂಬಳೆ ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಇದೀಗ ಬಂಧಿತ ಆರೋಪಿಗಳಿಂದ 1.94 ಲಕ್ಷ ರೂಪಾಯಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಇಬ್ಬರಲ್ಲಿ ಓರ್ವ ಬಂಧಿತ ಆರೋಪಿ ಯಲ್ಲಪ್ಪ ಗಡ್ಡಿ ಕುಖ್ಯಾತ ಕಳ್ಳನೆಂದು ಪೊಲೀಸರು ತಿಳಿಸಿದ್ದಾರೆ.

Also Read  ತುಳಸಿ ದೀಪಾರಾಧನೆ, ಪ್ರದಕ್ಷಣೆಯಿಂದ ಎಷ್ಟೆಲ್ಲ ಉಪಯೋಗ

 

error: Content is protected !!
Scroll to Top