ಇರಾ : ಶಾಸಕ ಯು.ಟಿ ಖಾದರ್ ರಿಂದ ಶಾಲಾ ಸೇತು ಕಾಮಗಾರಿ ಪರಿಶೀಲನೆ

(ನ್ಯೂಸ್ ಕಡಬ) newskadaba.com ಇರಾ . 08: ಕರ್ನಾಟಕ ಕೇರಳ ರಾಜ್ಯಗಳ ಗಡಿ ಪ್ರದೇಶದ ಇರಾ ಗ್ರಾಮದ ಬಾಳೆಪುಣಿ ಕುದುಂಬು ವಳಚ್ಚಿಳ್ ಎಂಬಲ್ಲಿ ತಮ್ಮ ಶಿಫಾರಸ್ಸಿನ ಮೂಲಕ ಪಿಡಬ್ಲ್ಯುಡಿ ಇಲಾಖೆಯ ಮೂಲಕ ಅನುಷ್ಠಾನಗೊಳಿಸಿದ 15 ಲಕ್ಷ ಅಂದಾಜು ಮೊತ್ತದ ಶಾಲಾ ಸೇತು ಕಿರುಸೇತುವೆ ಕಾಮಗಾರಿಯನ್ನು ಶಾಸಕರಾದ ಯು ಟಿ ಖಾದರ್ ಜನಪ್ರತಿನಿಧಿಗಳ ಜೊತೆ ಆಗಮಿಸಿ ಪರಿಶೀಲನೆ ನಡೆಸಿದರು.

ಸ್ಥಳೀಯ ಗ್ರಾಮಸ್ಥರು ಈ ಸೇತುವೆಯ ಸಂಪರ್ಕ ರಸ್ತೆಯ ಅಭಿವೃದ್ಧಿಗೆ ಬೇಡಿಕೆ ಸಲ್ಲಿದಾಗ ಶಾಸಕ ಯು ಟಿ ಖಾದರ್ ರವರು ಮುಂದಿನ ದಿನಗಳಲ್ಲಿ ಅಭಿವೃದ್ದಿ ಈಡೇರಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಇರಾ ಗ್ರಾಮ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷರು, ಸದಸ್ಯರು ಸೇರಿದಂತೆ ಆನೇಕಉಪಸ್ಥಿತರಿದ್ದರು.

Also Read  ದಲಿತರ ಮೇಲೆ ಹಲ್ಲೆ ಪ್ರಕರಣ ➤ ಆರೋಪಿಗಳು ಅರೆಸ್ಟ್

 

error: Content is protected !!
Scroll to Top