(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ನ.8: ಸುಬ್ರಹ್ಮಣ್ಯದ ಕೆ.ಎಸ್.ಎಸ್. ಕಾಲೇಜಿನಲ್ಲಿ ಆತ್ಮ ನಿರ್ಭರ ಭಾರತ ಉದ್ಯೋಗ ನೈಪುಣ್ಯ ಶಿಬಿರವು ಇಂದಿನಿಂದ ಆರಂಭಗೊಳ್ಳುತ್ತಿದ್ದು, ಮುಜುರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಯವರು ಇಂದು ಕಾರ್ಯಕ್ರಮಕ್ಕೆಚಾಲನೆ ನೀಡಿ ದೀಪ ಬೆಳಗಿಸುವುದರ ಮೂಲಕ ಶಿಬಿರನ್ನು ಉದ್ಘಾಟಿಸಿದರು.
ಗ್ರಾಮ ವಿಕಾಸ ಸಮಿತಿ, ಮಂಗಳೂರು ವಿಭಾಗ ವಿವೇಕಾನಂದ ವಿದ್ಯಾವರ್ಧಕ ಸಂಘ(ರಿ) ಪುತ್ತೂರು ಸಹಕಾರ ಭಾರತಿ ದ.ಕ ಜಿಲ್ಲೆ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜ, ಪುತ್ತೂರು, ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ಹಾಗೂ ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೇಷಿ ಪತ್ತಿನ ಸರಕಾರಿ ಸಂಘ ನಿಯಮಿತ ಸುಬ್ರಹ್ಮಣ್ಯ ಇವುಗಳ ಸಹಯೋಗದೊಂದಿಗೆ ಆತ್ಮ ನಿರ್ಭರ ಭಾರತಕ್ಕಾಗಿ ಉದ್ಯೋಗ ನೈಪುಣ್ಯ ತರಬೇತಿ ಶಿಬಿರವು ದಿನಾಂಕ 08-11-2020 ರಿಂದ 14-11-2020 ರ ವರೆಗೆ ಕೆ.ಎಸ್.ಎಸ್. ಕಾಲೇಜಿನಲ್ಲಿ ನಡೆಯಲಿದೆ. ಇನ್ನು ಉದ್ಯೋಗ ತರಬೇತಿ ಶಿಬಿರದಲ್ಲಿ 400 ಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದಾರೆ. ವೇದಿಕೆಯಲ್ಲಿ ನಾ. ಸೀತಾರಾಂ, ಕೆ.ಎಸ್.ಎಸ್. ಕಾಲೇಜಿನ ಪ್ರಾಂಶುಪಾಲ ಪ್ರೋ.ಉದಯಕುಮಾರ್, ಜಯಪ್ರಕಾಶ್ ಕೂಜುಗೋಡು, ಶೋಭಾ ನಲ್ಲೂರಾಯ, ವಿನೋದ್ ಬೊಳ್ಮಲೆ, ಸೂರ್ಯನಾಥ ಆಳ್ವ, ರಕ್ಷಿತ್ ಪರಮಲೆ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಲೋಹಿತ್ ಮುಚ್ಚಾರವರು ನಿರೂಪಿಸಿದರು.