ಕಲ್ಮಕಾರು : ಬೈಲು ಕಿಂಡಿ ಅಣೆಕಟ್ಟು ಸ್ವಚ್ಛತೆ

(ನ್ಯೂಸ್ ಕಡಬ) newskadaba.com ಕಲ್ಮಕಾರು  . 08: ಕಲ್ಮಕಾರಿನಲ್ಲಿ ವಿಪತ್ತು ನಿರ್ವಹಣಾ ಘಟಕದಿಂದ ಕಿಂಡಿ ಅಣೆಕಟ್ಟು ಸ್ವಚ್ಛಗೊಳಿಸಿದ್ದಾರೆ. ನ.07 ರ ಶನಿವಾರದಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಬ್ರಹ್ಮಣ್ಯ ವಲಯದ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಕಲ್ಮಕಾರು ಬೈಲು ಕಿಂಡಿ ಅಣೆಕಟ್ಟು ಸ್ವಚ್ಛತಾ ಕಾರ್ಯ ನಡೆಸಿದ್ದಾರೆ.

ಈ ಸ್ಛಚ್ಛತಾ ಕಾರ್ಯ ಸಂದರ್ಭದಲ್ಲಿ ಸುಬ್ರಹ್ಮಣ್ಯ ವಲಯದ ಮೇಲ್ವಿಚಾರಕರಾದ ಸೀತಾರಾಮ್, ತೇಜಕುಮಾರ್ ಕೊತ್ನಡ್ಕ,ತೇಜಕುಮಾರ್ ದಬ್ಬಡ್ಕ, ಶಿವರಾಮ ಮತ್ತು ಘಟಕದ ವಲಯ ಸಂಯೋಜಕರಾದ ಮಣಿಕಂಠ ಕಟ್ಟ ಸತೀಶ್ ಟಿ.ಎನ್ ಸೇರಿದಂತೆ ಆನೇಕರು ಈ ಕಿಂಡಿ ಅಣೆಕಟ್ಟು ಕಾರ್ಯದಲ್ಲಿ ತೊಡಗಿಕೊಂಡಿದ್ದರು.

Also Read  ಐತ್ತೂರು ಗ್ರಾಮದ ಸುಂಕದಕಟ್ಟೆ 72 ಕಾಲನಿಯ ಮುತ್ತುಮಾರಿಯಮ್ಮ ದೇವಸ್ಥಾನದ 41ನೇ ವರ್ಷದ ವರ್ಷಾವಧಿ ಜಾತ್ರೋತ್ಸವ

error: Content is protected !!
Scroll to Top