ನೂಜಿಬಾಳ್ತಿಲ: ಗಾಂಧಿಜಯಂತಿ ದಿನಾಚರಣೆ ► ಸ್ವಚ್ಚತಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕಡಬ,ಅ.3. ಇಲ್ಲಿನ ನೂಜಿಬಾಳ್ತಿಲ ಗ್ರಾ.ಪಂ.ನಲ್ಲಿ ಗಾಂಧಿಜಯಂತಿ ದಿನಾಚರಣೆ ಹಾಗೂ ಸ್ವಚ್ಚತಾ ಕಾರ್ಯಕ್ರಮವನ್ನು ಸೋಮವಾರ ನಡೆಸಲಾಯಿತು.

ಜಿ.ಪಂ.ಸದಸ್ಯರಾದ ಪಿ.ಪಿ ವರ್ಗೀಸ್ರವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬಳಿಕ ಸ್ವಚ್ಚತಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿ ಮಹಾತ್ಮ ಗಾಂಧೀಜಿಯವರ ಕನಸನ್ನು ನನಸಾಗಿಸುವುದರೊಂದಿಗೆ ದೇಶಾದ್ಯಂತ ಗಾಂಧಿ ಜಯಂತಿಯನ್ನು ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ನಮ್ಮ ಕಡಬ ತಾಲೂಕಿನಾದ್ಯಂತ ಎಲ್ಲಾ ಗ್ರಾ.ಪಂ.ನಲ್ಲಿ ಸಂಘಸಂಸ್ಥೆಗಳಲ್ಲಿ, ಶಾಲಾ ಕಾಲೇಜುಗಳು, ಪ್ರಾರ್ಥನಾ ಮಂದಿರಗಳು ಸೇರಿದಂತೆ ಪರಿಸರದಲ್ಲಿ ಸಂಪೂರ್ಣ ಸ್ವಚ್ಚತೆಯನ್ನು ಮಾಡಬೇಕಾಗಿದೆ ಎಂದ ಅವರು ಗಾಂಧಿಜಯಂತಿಯನ್ನು ಒಂದು ದಿನಕ್ಕೆ ಕೈಬಿಡದೆ ಪ್ರತೀ ದಿನ ಸ್ವಚ್ಚತೆಯನ್ನು ಕಾಪಾಡುವಂತೆ ತಿಳಿಸಿದರು.

ಗ್ರಾ.ಪಂ.ಅಧ್ಯಕ್ಷ ಸದಾನಂದ ಗೌಡ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ತ್ಯಾಜ್ಯ ನಮ್ಮ ಹೊಣೆ ಎಂಬ ಧ್ಯೇಯ ವಾಕ್ಯದೊಂದಿಗೆ ಎಲ್ಲಾ ಅಂಗಡಿ ಮುಗ್ಗಟ್ಟುಗಳಲ್ಲಿ ಅಂಗಡಿ ಮಾಲಕರೇ ಸ್ವಚ್ಚತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಗ್ರಾಮವನ್ನಾಗಿಸಿ ಎಲ್ಲಾ ಬ್ಯಾನರ್ಗಳಿಗೆ ನಿಷೇಧ ಹೇರಿ, ಗ್ರಾ.ಪಂ.ವ್ಯಾಪ್ತಿಯಲ್ಲಿ ಸಂಪೂರ್ಣ ಸ್ವಚ್ಚತೆಗೆ ಆದ್ಯತೆ ನೀಡಲು ಎಲ್ಲರು ನಮ್ಮೊಂದಿಗೆ ಸಹಕರಿಸಬೇಕಾಗಿ ವಿನಂತಿಸಿದ ಅವರು ಬೆಥನಿ ಪ.ಪೂ.ಕಾಲೇಜಿನ ಆಡಳಿತ ಮಂಡಳಿ ರಕ್ಷಕ ಶಿಕ್ಷಕ ಸಂಘದವರ ಸಹಕಾರದೊಂದಿಗೆ ಕಡಬ ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾರ್ಥಿಗಳಿಂದ ಸಂಪೂರ್ಣ ಗ್ರಾ.ಪಂ.ವ್ಯಾಪ್ತಿಯನ್ನು ಸ್ವಚ್ಚಗೊಳಿಸುವಲ್ಲಿ ಸಹಕರಿಸಿದ ಎಲ್ಲರಿಗೂ ಗ್ರಾ,.ಪಂ.ವತಿಯಿಂದ ಕೃತಜ್ಞತೆ ಸಲ್ಲಿಸಿದರು.

Also Read  ಬೀದಿನಾಯಿಗಳ ಅಟ್ಟಹಾಸಕ್ಕೆ 7 ವರ್ಷದ ಬಾಲಕ ಬಲಿ

ತಾ.ಪಂ.ಸದಸ್ಯ ಗಣೇಶ್ ಕೈಕುರೆ ಮಾತನಾಡಿ ಸ್ವಚ್ಚತೆಯೇ ಮನುಷ್ಯನ ಆರೋಗ್ಯಕ್ಕೆ ಉತ್ತಮ ನಿದರ್ಶನವಾಗಿದ್ದು ನಮ್ಮ ಪರಿಸರ ಸ್ವಚ್ಚವಾಗಿಡಲು ನಾವು ಪ್ರಯತ್ನಿಸಬೇಕಾಗಿದೆ. ಗಾಂಧೀಜಿ ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆಯುವುದರೊಂದಿಗೆ ಸ್ವಚ್ಚ ಭಾರತ ನಿರ್ಮಿಸುವಲ್ಲಿ ಎಲ್ಲರೂ ಶ್ರಮಿಸುವುದು ಅತೀ ಅಗತ್ಯವಾಗಿದೆ ಎಂದರು.

ಮರ್ದಾಳ ಜೀವನ್ ಜ್ಯೋತಿ ವಿಶೇಷ ಶಾಲಾ ನಿರ್ದೇಶಕರಾದ ರೆ|ಫಾ| ಆ್ಯಂಟನಿ ಒ.ಐ.ಸಿ, ರೆಂಜಿಲಾಡಿ ಬೀಡಿನ ಯಶೋಧರ ಯಾನೆ ತಮ್ಮಯ್ಯ ಬಲ್ಲಾಳ್ ಶುಭಹಾರೈಸಿದರು.
ಕುಕ್ಕೇಶ್ರೀ ಸುಬ್ರಹ್ಮಣ್ಯ ದೇವಾಸ್ಥಾನದ ಟ್ರಸ್ಟಿ ಬಾಲಕೃಷ್ಣ ಗೌಡ ಬಳ್ಳೇರಿ, ನೂಜಿಬಾಳ್ತಿಲ ಗ್ರಾ.ಪಂ.ಉಪಾಧ್ಯಕ್ಷೆ ಭವಾನಿ, ಮಾಜಿ ಉಪಾಧ್ಯಕ್ಷ ಆಂಜೇರಿ ಜೋಸ್, ಸದಸ್ಯರಾದ ಹರೀಶ್ ಎನ್, ತೋಮಸ್ ಕೆ.ಜೆ, ರಾಜು ಗೋಳಿಯಡ್ಕ, ರಾಮಚಂದ್ರ ಗೌಡ ಎಸ್, ವಲ್ಸ ಕೆ.ಜೆ, ರಜಿತಾಪದ್ಮನಾಭ, ಹೊನ್ನಮ್ಮ ಪಾಲೆತ್ತಡ್ಕ, ಪುಷ್ಪಲತಾ, ಅಮ್ಮಣಿ ಜೋಸೆಫ್, ಆಶಾಕಾರ್ಯಕರ್ತೆಯರಾದ ಲೀಲಾವತಿ ಅಡೆಂಜ, ವಿನೋದ ಎನ್ಕಾಜೆ, ಕಡಬ ಪ.ಪೂ.ಕಾಲೇಜಿನ ಪ್ರಾಂಶುಪಾಲರಾದ ಚೆರಿಯನ್ ಇ.ಸಿ, ಉಪನ್ಯಾಸಕರಾದ ಹರಿಶಂಕರ್, ಸುಖೇಶ್, ಸೀಮಾ ಕನ್ವಾರೆ, ಲಾವಣ್ಯ ಕಡಬ, ಸುಷ್ಮಾ , ಬೆಥನಿ ಪ.ಪೂ.ಕಾಲೇಜಿನ ಉಪನ್ಯಾಸಕರಾದ ಜೋಸೆಫ್ ಟಿ.ಜೆ, ಶಾಂಭವಿ, ಜಿನ್ಸಿ, ಬೀನಾ ಜೋರ್ಜ್, ಶಾರೀರಿಕ ಶಿಕ್ಷಕ ಪ್ರವೀಣ್, ಪ್ರೌಢಶಾಲಾ ಮುಖ್ಯಗುರುಗಳಾದ ತೋಮಸ್ ಎ.ಕೆ, ಶಿಕ್ಷಕರಾದ ಸುಬ್ರಹ್ಮಣ್ಯ ಭಟ್, ಬಾಲಕೃಷ್ಣ ರೈ, ಬೆಥನಿ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ವಸಂತ ಗೌಡ ಮಾರಪ್ಪೆ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಭಿಲಾಷ್ ಪಿ.ಕೆ ಸೇರಿದಂತೆ ಶಾಲಾ ಕಾಲೇಜಿನ ಶಿಕ್ಷಕ ಶಿಕ್ಷಕೇತರ ವರ್ಗದವರು, ಜನಪ್ರತಿನಿಧಿಗಳು, ಸ್ತ್ರೀಶಕ್ತಿ ಮಹಿಳೆಯರು, ಆಶಾಕಾರ್ಯಕರ್ತೆಯರು, ವಿದ್ಯಾರ್ಥಿ ವಿದ್ಯಾರ್ಥಿನಿಯರು, ಎನ್ಎಸ್ಎಸ್ ಕ್ಯಾಂಪ್ನ ಶಿಬಿರಾರ್ಥಿಗಳು, ಸಾರ್ವಜನಿಕರು, ಸ್ವಚ್ಚತೆಯಲ್ಲಿ ಪಾಲ್ಗೊಂಡರು.

Also Read  ಸುಳ್ಯ : 'ಕನ್ನಡ ಶಾಲೆಗಳಲ್ಲಿ ಕನ್ನಡದ ಬೇರುಗಳನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು' - ಧನಂಜಯ ಕುಂಬ್ಳೆ

ನೂಜಿಬಾಳ್ತಿಲ ಹಾ.ಉ.ಸ.ಸಂಘದ ಎದುರು ಸ್ವಚ್ಚತಾ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು ಕಲ್ಲುಗುಡ್ಡೆ ಪೇಟೆಯಾದ್ಯಂತ ಸ್ವಚ್ಚಗೊಳಿಸುವುದರೊಂದಿಗೆ ಪಾಡ್ಲ, ಗೋಳಿಯಡ್ಕ, ಮುಖಾಂತರ ಬೆಥನಿ ಪ.ಪೂ.ಕಾಲೇಜಿನವರೆಗೆ ಸಂಪೂರ್ಣ ಸ್ವಚ್ಚಗೊಳಿಸಲಾಯಿತು.

error: Content is protected !!
Scroll to Top