13 ವರ್ಷ ಪ್ರೀತಿಸಿ ಮದುವೆ ಹಿಂದಿನ ದಿನ ನಾಪತ್ತೆಯಾದ ಪ್ರೇಮಿ.!

(ನ್ಯೂಸ್ ಕಡಬ) newskadaba.com ಉಡುಪಿ . 08: 13 ವರ್ಷಗಳ ಕಾಲ ಹುಡುಗಿಯನ್ನು ಪ್ರೀತಿಸಿದ ಪ್ರೇಮಿಯೊಬ್ಬ ಮದುವೆಗೆ ಇನ್ನೇನು ಕೆಲವೇ ಗಂಟೆಗಳಿದೆ ಎನ್ನುವಾಗ ನಾಪತ್ತೆಯಾಗಿದ್ದಾನೆ. ಪ್ರೇಯಸಿಯನ್ನು ಪ್ರೀತಿಸಿದ ಪ್ರಿಯತಮ ಆಕೆಯನ್ನು ಮದುವೆಯಾಗಲು ಇಷ್ಟವಿಲ್ಲದ ಕಾರಣ ನಾಪತ್ತೆಯಾಗಿರುವ ಪ್ರಕರಣ ಉಡುಪಿಯ ಪರ್ಕಳದಲ್ಲಿ ನಡೆದಿದೆ. ಗಣೇಶ್​ ಮೋಸ ಮಾಡಿದ ಯುವಕ. ಮಮತಾ ಎಂಬ ಹುಡುಗಿಯನ್ನು ಕಳೆದ 13 ವರ್ಷಗಳಿಂದ ಪ್ರೀತಿಸುತ್ತಿದ್ದ ಯುವಕ ನ.7ರಂದು ಮದುವೆಯಾಗಬೇಕಿತ್ತು. ಆದರೆ, ಯುವಕ ನಾಪತ್ತೆಯಾಗಿದ್ದಾನೆ . ಕಳೆದೆರಡು ದಿನಗಳಿಂದ ಆತನ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ.

13 ವರುಷಗಳಿಂದ ಗಣೇಶ್ ಹಾಗೂ ಯುವತಿ ಒಬ್ಬರನೊಬ್ಬರು ಪ್ರೀತಿಸುತ್ತಿದ್ದು, ಗಣೇಶ್ ಮದುವೆ ಯಾಗುವ ಭರವಸೆಯನ್ನು ಯುವತಿಗೆ ನೀಡಿದ್ದ. ಹಿಂದೋಮ್ಮೆ ಗಣೇಶ್ ಬೇರೊಂದು ಯುವತಿಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ, ಈ ವಿಚಾರ ತಿಳಿಯುತ್ತಿದ್ದಂತೆ ಯುವತಿ ಮಮತ ಪೊಲೀಸ್ ಠಾಣಾ ಮೆಟ್ಟಿಲೇರಿ ಕೊನೆಗೆ ರಾಜಿ ಸಂದನದ ಮೂಲಕ ಸಮಸ್ಯೆ ಬಗೆಹರಿಸಲಾಗಿತ್ತು.

Also Read  ಮೇಲ್ಛಾವಣಿ ಸಮೇತ ನೆಲಕ್ಕುರುಳಿದ ಕಡಬದ ಸರಕಾರಿ ಕಾಲೇಜು ಕಟ್ಟಡ ► ವಿದ್ಯಾರ್ಥಿಗಳು ಇಲ್ಲದಿದ್ದರಿಂದ ತಪ್ಪಿದ ಸಂಭಾವ್ಯ ಅನಾಹುತ

ಯುವಕ ಗಣೇಶ್ ಹಾಗೂ ಯುವತಿ ಮಮತ ಮದುವೆಗೆ ಇಬ್ಬರ ಮನೆಯಲ್ಲು ಒಪ್ಪಿಗೆ ಸಿಕ್ಕ ಫಲವಾಗಿ ನವೆಂಬರ್ 7ರಂದು ಮದುವೆಗೆ ದಿನ ನಿಗದಿಯಾಗಿತ್ತು.ನ.6 ರಂದು ಮೆಹಂದಿ ಶಾಸ್ತ್ರವೂ ಮುಗಿದಿತ್ತು.ಅದೇ ದಿನಾ ರಾತ್ರಿ ಏಕಾಏಕಿಯಾಗಿ ಯುವಕ ಪರ್ಕಳದ ಗಣೇಶ್ ನಾಪತ್ತೆಯಾಗಿದ್ದಾನೆ. ಇದೀಗಾ ಯುವತಿ ಮಮತಾ, ಗಣೇಶ್ ನನಗೆ ಮತ್ತೆ ಮೋಸ ಮಾಡಿದ್ದಾನೆ ಎಂದು ಕಣ್ಣಿರಿಡುತ್ತಿದ್ದಾಳೆ. ಜತೆಗೆ ಮತ್ತೊಮ್ಮೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು, ಕಾನೂನು ಹೋರಟಕ್ಕೆ ಸಿದ್ದ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾಳೆ.

 

error: Content is protected !!
Scroll to Top