ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣ ➤ ಶಾಸಕ ಕಮರುದ್ದೀನ್ ಬಂಧನ

(ನ್ಯೂಸ್ ಕಡಬ) newskadaba.com ಕೇರಳ, ನ. 07.  ಫ್ಯಾಶನ್ ಗೋಲ್ಡ್ ಇಂಟರ್ ನ್ಯಾಷನಲ್ ಕಂಪನಿಯ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರದ ಮುಸ್ಲಿಂ ಲೀಗ್ ಶಾಸಕರಾದ ಎಂ.ಸಿ ಕಮರುದ್ದೀನ್ ಅವರನ್ನು ಬಂಧಿಸಲಾಗಿದೆ.

ಫ್ಯಾಶನ್ ಗೋಲ್ಡ್ ಇಂಟರ್ ನ್ಯಾಷನಲ್ ಕಂಪನಿ ಹೆಸರಿನಲ್ಲಿ 700 ಜನರು ಸುಮಾರು 130 ಕೋಟಿ ರೂ. ಗಳನ್ನುಈ ಸಂಸ್ಥೆಯಲ್ಲಿ ಠೇವಣಿ ಇಟ್ಟಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ 109 ಪ್ರಕರಣಗಳು ದಾಖಲಾಗಿದ್ದು, 15 ಕೋಟಿ ರೂ.ಗಳ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ. ಪಿ ವಿವೇಕ್ ಕುಮಾರ್ ನೇತೃತ್ವದ ವಿಶೇಷ ತನಿಖಾ ತಂಡ ಶಾಸಕ ಕಮರುದ್ದೀನ್ ಅವರನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಚಾರಣೆ ನಡೆಸಿದ್ದು, ಮೂಲಗಳ ಪ್ರಕಾರ, ತನಿಖಾ ತಂಡಕ್ಕೆ ಪ್ರಮುಖ ಸುಳಿವು ಸಿಕ್ಕಿರುವ ಕಾರಣ, ಶಾಸಕರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

Also Read  ನಿರ್ಭಯಾ ಅಪರಾಧಿಗಳಿಗೆ ಮಾ.20ರಂದು ಗಲ್ಲು ಖಚಿತಗೊಳಿಸಿದ ಸುಪ್ರೀಂ

error: Content is protected !!
Scroll to Top