ಬಂಟ್ವಾಳ ಪುರಸಭೆ ಕಾಂಗ್ರೆಸ್ ತೆಕ್ಕೆಗೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ನ. 07. ಇಂದು ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಎಸ್.ಡಿ.ಪಿ.ಐ ಬೆಂಬಲದೊಂದಿಗೆ ಬಂಟ್ವಾಳ ಪುರಸಭೆಯಲ್ಲಿ ಕಾಂಗ್ರೆಸ್ ಜಯಭೇರಿ ಸಾಧಿಸಿದೆ.

ತಲಾ 16 ಮತಗಳನ್ನು ಪಡೆದು ಕಾಂಗ್ರೆಸ್ ನ ಶರೀಫ್ ಪರ್ಲಿಯಾ ಅಧ್ಯಕ್ಷರಾಗಿ ಮತ್ತು ಜಸಿಂತಾ ಡಿಸೋಝಾ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಒಟ್ಟು 27 ಸದಸ್ಯ ಬಲದ ಬಂಟ್ವಾಳ ಪುರಸಭೆಯಲ್ಲಿ ಕಾಂಗ್ರೆಸ್ 12 ಸೀಟು ಮತ್ತು ಎಸ್.ಡಿ.ಪಿ.ಐ 4 ಸೀಟುಗಳನ್ನು ಹೊಂದಿದ್ದವು. ಬಿಜೆಪಿ 11 ಸೀಟುಗಳನ್ನು ಹೊಂದಿದ್ದು, ಸ್ಥಳೀಯ ಶಾಸಕರು ಮತ್ತು ಸಂಸದರ ತಲಾ ಒಂದು ಮತ ಒಳಗೊಂಡಂತೆ ಒಟ್ಟು 13 ಮತಗಳನ್ನು ಹೊಂದಿತ್ತು.ಈ ಮಧ್ಯೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಗೋವಿಂದ್ ಪೈ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಿನಾಕ್ಷಿ 13 ಮತಗಳನ್ನು ಪಡೆದುಕೊಂಡರು.

Also Read  ಕಲ್ಲಡ್ಕ: ಮೂರು ಕಾರುಗಳ ನಡುವೆ ಸರಣಿ ಅಪಘಾತ ► ಇಬ್ಬರಿಗೆ ಗಾಯ

 

error: Content is protected !!
Scroll to Top