ಮಂಗಳೂರು: ಮಾರ್ಕ್ ರೊಡ್ರಿಗಸ್ ನಿಧನ

(ನ್ಯೂಸ್ ಕಡಬ) newskadaba.com ಮಂಗಳೂರು.7:  ಎರಡನೇ ಮಹಾಯುದ್ಧದ ಅನುಭವಿ ಮಾರ್ಕ್ ರೊಡ್ರಿಗಸ್‌ (98) ಅವರು ಕಳೆದ ದಿನದಂದು ನಿಧನರಾದರು. 1922ರ ಎಪ್ರಿಲ್ 25 ರಂದು ಕುಂದಾಪುರದಲ್ಲಿ ಜನಿಸಿದ್ದು,  ಇವರು ಬೆಳೆದಿದ್ದು ಮಂಗಳೂರಿನಲ್ಲಿ. ಇವರು ಸೈಂಟ್‌ ಅಲೋಶಿಯಸ್‌ ಪ್ರೌಢಶಾಲೆಯಲ್ಲಿ ಅಧ್ಯಯನ ಮಾಡಿ ನಂತರ 1940ರಲ್ಲಿ ತಮ್ಮ 18ನೇ ವಯಸ್ಸಿನಲ್ಲಿ ಬ್ರಿಟಿಷ್ ಭಾರತೀಯ ಸೇನೆಗೆ ಸೇರ್ಪಡೆಗೊಂಡರು.

 

 

ಎರಡನೆಯ ಮಹಾಯುದ್ಧ (1939-1945) ಪ್ರಗತಿಯಲ್ಲಿದ್ದ ಸಂದರ್ಭ ಇವರನ್ನು ಮಿತ್ರರಾಷ್ಟ್ರಗಳ ವಿರುದ್ದ ಹೋರಾಡಲು ಮಧ್ಯಪ್ರಾಚ್ಯ ಯುದ್ದ ವಲಯಕ್ಕೆ ಕಳುಹಿಸಲಾಗಿತ್ತು. 1942 ರಲ್ಲಿ, ಮಾರ್ಕ್‌ ಅವರನ್ನು ಜರ್ಮನ್ ಪಡೆಗಳು ವಶಪಡಿಸಿಕೊಂಡಿದ್ದರು ಏಳು ವರ್ಷಗಳ ಸಕ್ರಿಯ ಮಿಲಿಟರಿ ಸೇವೆಯ ನಂತರ ಮಾರ್ಕ್ ಅವರು ಭಾರತಕ್ಕೆ ಮರಳಿದರು. ಇವರು ಮಹಾರಾಷ್ಟ್ರದ ಅಹ್ಮದ್‌ನಗರದಲ್ಲಿ ಸುಮಾರು 30 ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ 1981ರಲ್ಲಿ ಡಿಆರ್‌ಡಿಒ ವಿಜ್ಞಾನಿಗಳಾಗಿ ನಿವೃತ್ತರಾದರು. ನಂತರ ಅವರು ಮಂಗಳೂರಿನ ಕದ್ರಿಯ ಅಲ್ವಾರಿಸ್‌ ರೋಡ್‌ನ ನಿವಾಸದಲ್ಲಿ ವಾಸ್ತವವಿದ್ದರು. ಮಾರ್ಕ್ ಅವರ ಅಂತ್ಯಕ್ರಿಯೆಯು ನ.8ರ ನಾಳೆ (ಭಾನುವಾರ) ಮಧ್ಯಾಹ್ನ 3.30ಕ್ಕೆ ಬೆಂದೂರಿನ ಸೈಂಟ್‌ ಸೆಬಾಸ್ಟಿಯನ್‌ ಚರ್ಚ್‌ನಲ್ಲಿ ನೆರವೇರಲಿದೆ.

Also Read  ಗೋಳಿಯಡ್ಕ: ಅಸೌಖ್ಯದಿಂದ ನಿಧನ

 

error: Content is protected !!
Scroll to Top