ಬಜ್ಪೆ: ಅಪ್ರಾಪ್ತೆಗೆ ಥಳಿಸಿದ ಮಹಿಳಾ ಪೇದೆ ವಿರುದ್ದ ದೂರು

(ನ್ಯೂಸ್ ಕಡಬ) newskadaba.com ಬಜ್ಪೆ . 07: ಅಪ್ರಾಪ್ತೆಗೆ ಥಳಿಸಿದ ಆರೋಪದಡಿಯಲ್ಲಿ ಮಂಗಳೂರಿನ ಬಜ್ಪೆ ಠಾಣೆ ಮಹಿಳಾ ಪೇದೆ ವಿರುದ್ದ ಎಫ್ ಐಆರ್ ದಾಖಲಾಗಿದೆ.  ಅಪ್ರಾಪ್ತೆಯ ಪೋಷಕರು ಬಜ್ಪೆ ಠಾಣೆಯ ಸಿಬ್ಬಂದಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮೂಡಬಿದ್ರೆಯ ಯುವಕನೊಬ್ಬ ತನ್ನನ್ನು ಪ್ರೀತಿಸುವಂತೆ ಅಪ್ರಾಪ್ತೆಗೆ ಪೀಡಿಸುತ್ತಿದ್ದನಂತೆ. ಇದರಿಂದ ಬೇಸತ್ತ ಯುವತಿ ತನ್ನ ಪೋಷಕರ ಜೊತೆ ಬಜ್ಪೆ ಪೊಲೀಸ್ ಠಾಣೆಗೆ ತೆರಳಿದ್ದಾಳೆ ಈ ವೇಳೆ ಮಹಿಳಾ ಪೊಲೀಸ್ ಸಿಬ್ಬಂದಿಯೊಬ್ಬರು 16 ವರ್ಷದ ಈ ಅಪ್ರಾಪ್ತೆಗೆ ಲಾಠಿಯಿಂದ ಹೊಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.  ಮಹಿಳಾ ಸಿಬ್ಬಂದಿ ವಿರುದ್ದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಸರ್ಕಾರಿ ಆಸ್ಪತ್ರೆ NHM ವೈದ್ಯಕೀಯ ಸಿಬ್ಬಂದಿಗೆ ಶೇ. 55ರಷ್ಟು ವೇತನ ಹೆಚ್ಚಳ: ದಿನೇಶ್ ಗುಂಡೂರಾವ್

error: Content is protected !!
Scroll to Top