ಶಿಕ್ಷಕ ಮಿತ್ರ ಆ್ಯಪ್ ಅಥವಾ ಇ.ಇ.ಡಿ.ಎಸ್ ಶಾಲಾ ಲಾಗಿನ್ ನಲ್ಲಿ – ಶಿಕ್ಷಕರ ವರ್ಗಾವಣೆ ತಿದ್ದುಪಡಿಗೆ ಅವಕಾಶ

(ನ್ಯೂಸ್ ಕಡಬ) newskadaba.com ಮಂಗಳೂರು, ನ. 07. ಪ್ರಸ್ತುತ ಸಾಲಿನ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ, ಶಿಕ್ಷಕರ ಸೇವಾ ವಿವರವನ್ನು ಇ.ಇ.ಡಿ.ಎಸ್ ತಂತ್ರಾಂಶದಲ್ಲಿ ತಿದ್ದುಪಡಿ ಮಾಡುವ ಅವಕಾಶವನ್ನು ಉಪ ನಿರ್ದೇಶಕರ ಲಾಗಿನ್‍ ನಲ್ಲಿ  ನೀಡಲಾಗಿದ್ದು, ಶಿಕ್ಷಕರು  ತಮ್ಮ ಸೇವಾ ವಿವರಗಳನ್ನು ಶಿಕ್ಷಕ ಮಿತ್ರ ಆ್ಯಪ್ ಅಥವಾ ಇ.ಇ.ಡಿ.ಎಸ್ ಶಾಲಾ ಲಾಗಿನ್‍ ನಲ್ಲಿ ಖುದ್ದಾಗಿ ಪರಿಶೀಲಿಸಿಕೊಂಡು, ತಿದ್ದುಪಡಿಗಳಿದ್ದಲ್ಲಿ ಆಯಾ ಕೇತ್ರ ಶಿಕ್ಷಣಾಧಿಕಾರಿಗಳಿಗೆ ನವೆಂಬರ್ 9 ರೊಳಗೆ ಸೂಕ್ತ ದಾಖಲೆಗಳೊಂದಿಗೆ ಮನವಿಯನ್ನು ಸಲ್ಲಿಸಬೇಕು.


ತಿದ್ದುಪಡಿ ಮಾಡಲು ಅವಕಾಶ ನೀಡಲಾಗಿರುವ ಅಂಶಗಳು: ಹೆಸರು, ಜನ್ಮ ದಿನಾಂಕ, ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ  ವಿವರ,  ವಲಯ, ಹುದ್ದೆಯ ವಿವರ, ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಶಾಲೆಗೆ ವರದಿ ಮಾಡಿಕೊಂಡ ದಿನಾಂಕ.  ತಿದ್ದುಪಡಿಗೆ ಇದು ಅಂತಿಮ ಅವಕಾಶವಾಗಿದ್ದು, ಒಂದು ವೇಳೆ ಈ ಸಂದರ್ಭದಲ್ಲಿ ಅಹವಾಲನ್ನು ಸಲ್ಲಿಸದೇ ವರ್ಗಾವಣೆ ಸಮಯದಲ್ಲಿ ಅಹವಾಲನ್ನು ಸಲ್ಲಿಸಿದಲ್ಲಿ ಇಲಾಖೆ ಜವಾಬ್ದಾರರಾಗುವುದಿಲ್ಲ ಎಂದು ಉಪನಿರ್ದೇಶಕರು (ಆಡಳಿತ), ಸಾರ್ವಜನಿಕ ಶಿಕ್ಷಣ ಇಲಾಖೆ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Also Read  ಸುಳ್ಯದಲ್ಲಿ ಮತ್ತೆ ಭೂಕಂಪನ ➤ ಮನೆಗಳಿಗೆ ಹಾನಿ

error: Content is protected !!
Scroll to Top