ಕೋವಿಡ್ -19 ಸೋಂಕಿತ ನೌಕರರಿಗೆ ಮತ್ತು ಕಾರ್ಮಿಕರಿಗೆ ಕ್ವಾರಂಟೈನ್ ರಜೆ ನೀಡುವಂತೆ ರಾಜ್ಯ ಸರ್ಕಾರದಿಂದ ಆದೇಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 07. ಕೊರೋನಾ ಸೋಂಕು ಆವರಿಸಿಕೊಂಡ ನೌಕರರಿಗೆ ಹಾಗೂ ಕಾರ್ಮಿಕರಿಗೆ ಕ್ವಾರಂಟೈನ್ ರಜೆಯನ್ನು ನೀಡುವಂತೆ ರಾಜ್ಯ ಸರ್ಕಾರವು ಸೂಚನೆಯನ್ನು ಹೊರಡಿಸಿದ್ದು, ರಾಜ್ಯ ಸರ್ಕಾರದ ಪರವಾಗಿ ಎಲ್ಲಾ ಸಾರ್ವಜನಿಕ ಖಾಸಗಿ ಸಂಸ್ಥೆಗಳ ಉದ್ಯೋಗಿಗಳನ್ನು ಈ ಕೆಳಗಿನ ಸೂಚನೆಯಂತೆ ನೋಡಿಕೊಳ್ಳಲು ಮನವಿ ಮಾಡಲಾಗಿದೆ.

ಕೊರೋನಾ ಸೋಂಕಿತ ನೌಕರರು ಹಾಗೂ ಕಾರ್ಮಿಕರು ಕ್ವಾರಂಟೈನ್ ನಲ್ಲಿ ಇರುವ ಅವಧಿಯನ್ನು ಗೈರು ಹಾಜರಿ ಎಂದು ಪರಿಗಣಿಸದೇ ಇರುವುದು, ಕೊರೊನಾದಿಂದ ಬಳಲುತ್ತಿರುವವರಿಗೆ ಅವರ ಹಕ್ಕಿನಲ್ಲಿರುವ ರಜೆಗಳನ್ನು ಉಪಯೋಗಿಸಿಕೊಳ್ಳಲು ಮನವಿ ಮಾಡಲಾಗಿದೆ. ಅಲ್ಲದೇ ಕೊರೊನಾ ಸೋಂಕಿತರ ಖಾತೆಯಲ್ಲಿ ರಜೆ ಇಲ್ಲದಿದ್ದಲ್ಲಿ, ಇತರ ಕಾರ್ಮಿಕರ ರಜೆಯನ್ನು ವರ್ಗಾಯಿಸಿಕೊಳ್ಳಲು ಅನುಕೂಲ ಮಾಡಿಕೊಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.

Also Read  ಮಂಗಳೂರು: ಎರಡು ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ➤ ಬಳಿಕ ಉಪ್ಪುನೀರಿಗೆ ಎಸೆದ ನೀಚ

error: Content is protected !!
Scroll to Top