ಎಸ್ಕೇಪ್ ಆಗಿದ್ದ ಅಪ್ರಾಪ್ತ ಜೋಡಿ ಭಟ್ಕಳದಲ್ಲಿ ಪತ್ತೆ.!

(ನ್ಯೂಸ್ ಕಡಬ) newskadaba.com ಭಟ್ಕಳ . 07: ಅಕ್ಟೋಬರ್ 28 ರಂದು ಪರಾರಿಯಾಗಿದ್ದ ಅಪ್ರಾಪ್ತ ಜೋಡಿ ಭಟ್ಕಳದಲ್ಲಿ ಪತ್ತೆಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನ್ನು 14 ದಿನಗಳ ಕಾಲ ಬಾಲಭವನಕ್ಕೆ ಒಳಪಡಿಸಲಾಗಿದೆ. ಪೆರ್ಡೂರಿನ ಕುಕ್ಕೆ ಹಳ್ಳಿಯ ಅಪ್ರಾಪ್ತ ಜೋಡಿಯನ್ನು ಭಟ್ಕಳದಲ್ಲಿ ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ.

 

ಅ. 28 ರಂದು ಕಾಲೇಜು ಗೆ ತೆರಳಿದ್ದ ಯುವತಿ, ತನ್ನ ಕಾಲೇಜಿನ ಯುವಕನ ಜೊತೆ ಬೈಕ್ ನಲ್ಲಿ ತೆರಳಿದ್ದಾಳೆ. ಬಳಿಕ ಖರ್ಚಿಗೆ ಹಣವಿಲ್ಲದಾಗ ತನ್ನ ಕಿವಿಓಲೆಯನ್ನು ಮಾರಾಟ ಮಾಡಿದ್ದಾರೆ. ಹಣ ಕಡಿಮೆಯಾದಗ ಯುವತಿ ತನ್ನ ತಾಯಿಗೆ ಕೆರೆ ಮಾಡಿ ಹಣ ನೀಡುವಂತೆ ತಿಳಿಸಿದ್ದಾಳೆ. ಫೋನ್ ಕರೆಯ ಆಧಾರದಲ್ಲಿ ಪ್ರಕರಣವನ್ನು ಭೇದಿಸಿದ ಹಿರಿಯಡ್ಕ ಪೋಲಿಸರು ಇಬ್ಬರನ್ನು ಭಟ್ಕದಲ್ಲಿ ಪತ್ತೆ ಹಚ್ಚಿ ಕರೆತಂದಿದ್ಧಾರೆ. ಸದ್ಯ ಯುವತಿಯನ್ನು ಮನೆಯರಿಗೆ ಒಪ್ಪಿಸಲಾಗಿದ್ದು, ಯುವಕನನ್ನು ಬಾಲಪರಾಧಿ ಎಂದು ಪರಿಗಣಿಸಿ ಬಾಲಭವನಕ್ಕೆ ಹಸ್ತಾಂತರಿಸಲಾಗಿದೆ.

Also Read  UPSC ಪಾಸ್ ಮಾಡಿ IAS ಅಧಿಕಾರಿಯಾದ ದಿವ್ಯಾಂಶು ನಿಗಮ್

 

 

error: Content is protected !!
Scroll to Top