ಕೇರಳ: ಪರಿಶಿಷ್ಟ ಪಂಗಡ ವ್ಯಕ್ತಿಯನ್ನು ಅರ್ಚಕರಾಗಿ ನೇಮಿಸುತ್ತಿರುವ ದೇವಸ್ವಂ ಬೋರ್ಡ್

(ನ್ಯೂಸ್ ಕಡಬ) newskadaba.com ಕೇರಳ . 07:  ಮೊದಲನೆ ಬಾರಿಗೆ ಕೇರಳದ ತಿರುವಾಂಕೂರು ದೇವಸ್ವಂ ಬೋರ್ಡ್(TDB)ನ ಅಡಿಯಲ್ಲಿ ನಿರ್ವಹಣೆಯಾಗುತ್ತಿರುವ ದೇವಾಲಯವೊಂದಕ್ಕೆ ಪರಿಶಿಷ್ಟ ಪಂಗಡದ ವ್ಯಕ್ತಿ ಅರ್ಚಕರಾಗಿ ನೇಮಕವಾಗಲಿದ್ದಾರೆ.

 

TDB ಯೂ ಸ್ವಾಯತ್ತ ಸಂಸ್ಥೆಯಾಗಿದ್ದು, ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನ ಸೇರಿದಂತೆ ಕೇರಳದ ದಕ್ಷಿಣದಲ್ಲಿ 1,200 ದೇವಾಲಯಗಳನ್ನು ನಿರ್ವಹಿಸುತ್ತಿದೆ. ಈ ದೇವಾಲಯಗಳಲ್ಲಿ 18 ಪರಿಶಿಷ್ಟ ಜಾತಿ ಹಾಗೂ 1 ಪರಿಶಿಷ್ಟ ಪಂಗಡದ ಅರ್ಚಕರು ಸೇರಿ ಒಟ್ಟು 19 ಜನರನ್ನು ನೇಮಿಸಲು ತಿರುವಾಂಕೂರು ದೇವಸ್ವಂ ಬೋರ್ಡ್ ನಿರ್ಧರಿಸಿದೆ.”TDB ಅಡಿಯಲ್ಲಿ ಬರುವ ದೇವಾಲಯದಲ್ಲಿ ಪರಿಶಿಷ್ಟ ಪಂಗಡದ ವ್ಯಕ್ತಿಯನ್ನು ಅರ್ಚಕನನ್ನಾಗಿ ನೇಮಕ ಮಾಡುತ್ತಿರುವುದು TDB ಯ ಇತಿಹಾಸದಲ್ಲೇ ಮೊದಲು” ಎಂದು ರಾಜ್ಯ ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

Also Read  ಪೊಲೀಸರಿಂದ ತಪ್ಪಿಸಿಕೊಳ್ಳಲು ಓಡುವಾಗ ಬಾವಿಗೆ ಬಿದ್ದು ಯುವಕ ಮೃತ್ಯು

 

 

error: Content is protected !!
Scroll to Top