ಬೆಳ್ಳಂ ಬೆಳಿಗ್ಗೆ ಕೆಎಎಸ್ ಅಧಿಕಾರಿಗೆ ಎಸಿಬಿಯಿಂದ ಶಾಕ್.!

(ನ್ಯೂಸ್ ಕಡಬ) newskadaba.com ಬೆಂಗಳೂರು . 07: ಬೆಳ್ಳಂ ಬೆಳಿಗ್ಗೆ  ಕೆಎಎಸ್ ಅಧಿಕಾರಿಗೆ ಎಸಿಬಿ ಶಾಕ್ ನೀಡಿದ್ದಾರೆ ಕೆಎಎಸ್ ಅಧಿಕಾರಿ ಡಾ. ಬಿ. ಸುಧಾ ಅವರ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಆಡಳಿತಾಧಿಕಾರಿಯಾಗಿರುವ ಸುಧಾ ಅವರ ಕೊಡಿಗೇನಹಳ್ಳಿಯಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ.

ಯಲಹಂಕದಲ್ಲಿರುವ ಫ್ಲಾಟ್, ಬ್ಯಾಟರಾಯನಪುರದ ಮನೆ, ಬಿಇಎಂಎಲ್ ನಲ್ಲಿರುವ ನಿವಾಸ, ಶಾಂತಿನಗರದಲ್ಲಿರುವ ಕಚೇರಿ ಹಾಗೂ ಉಡುಪಿ ಜಿಲ್ಲೆಯ ಹೆಬ್ರಿಯ ತಂಕಬಟ್ಟಿನ ಮನೆಯ ಮೇಲೆ ದಾಳಿ ನಡೆಸಲಾಗಿದೆ. ಏಕ ಕಾಲದಲ್ಲಿ ಆರು ಕಡೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.ಈ ಹಿಂದೆ ಭೂಸ್ವಾಧೀನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಭೂಸ್ವಾಧೀನಾಧಿಕಾರಿ ಆಗಿದ್ದ ಸುಧಾ ಅವರು ಅಕ್ರಮ ಆಸ್ತಿ ಗಳಿಕೆ, ಅವ್ಯವಹಾರ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಎಸಿಬಿಯಲ್ಲಿ ದೂರು ದಾಖಲಾಗಿದ್ದು, ಈ ಹಿನ್ನೆಯಲ್ಲಿ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Also Read  ಕಡಬದಲ್ಲಿಂದು SSF ದಕ್ಷಿಣ ಕನ್ನಡ ಬ್ಲಡ್ ಸೈಬೋ ಇದರ ರಕ್ತದಾನ ಶಿಬಿರ ➤ 50 ಕ್ಕೂ ಅಧಿಕ ರಕ್ತದಾನಿಗಳಿಂದ ರಕ್ತದಾನ

error: Content is protected !!
Scroll to Top