ಅಕ್ರಮ ಮರದ ದಿಮ್ಮಿಗಳ ಸಾಗಾಟ ➤ ಆರೋಪಿ ವಲಯ ಅರಣ್ಯಾಧಿಕಾರಿ ಬಲೆಗೆ

(ನ್ಯೂಸ್ ಕಡಬ) newskadaba.com ಪುಂಜಾಲಕಟ್ಟೆ  . 07: ಹಲವು ಮತ್ತು ವಿವಿಧ ಜಾತಿಯ ಮರದ ದಿಮ್ಮಿಗಳನ್ನು ಲಾರಿಯಲ್ಲಿ ತುಂಬಿಸಿಕೊಂಡು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ವಲಯ ಅರಣ್ಯಾಧಿಕಾರಿ ವಶಕ್ಕೆ ಪಡೆದುಕೊಂಡಿದ್ದಾರೆ.

ಗಸ್ತು ಕರ್ತವ್ಯದಲ್ಲಿದ್ದ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಎಚ್ ಎಸ್ ರವರು ಪುಂಜಾಲಕಟ್ಟೆ ಬಳಿ, ಸುಮಾರು 5ಲಕ್ಷ ಮೌಲ್ಯದ ಹಲಸು ಹಾಗೂ ವಿವಿಧ ಜಾತಿಯ ಮರದ ದಿಮ್ಮಿಗಳನ್ನು ಅಕ್ರಮವಾಘಿ ಸಾಗಾಟ ಮಾಡುತ್ತಿದ್ದ ಲಾರಿಯನ್ನು ತಡೆದು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ಮೊಗನಾಡು ಗ್ರಾಮದ ಏಳಬೈಲು ಶೇಡಿಗುರಿ ನಿವಾಸಿ ವಾಮನ ಎಂದು ತಿಳಿದು ಬಂದಿದೆ. ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದು, ಲಾರಿ ಮಾಲಕ ಕಿರಣ್ ಮೇಲೆ ಪ್ರಕರಣ ದಾಖಲಾಗಿದೆ.

Also Read  ಕಾಶ್ಮೀರದಲ್ಲಿ ವಿಧಿಸಿದ್ದ ಎಲ್ಲಾ ನಿರ್ಬಂಧಗಳನ್ನು ತೆರವುಗೊಳಿಸುವಂತೆ ಸುಪ್ರೀಂಕೋರ್ಟ್ ಗೆ ಅರ್ಜಿ ➤ ಸಂಪಾದಕಿ ಅನುರಾಧಾ ಭಾಸಿನ್

 

 

error: Content is protected !!
Scroll to Top