(ನ್ಯೂಸ್ ಕಡಬ) newskadaba.com ಕುಂದಾಪುರ ನ. 07: ಗಂಗೊಳ್ಳಿಯಿಂದ 8 ನಾಟಿಕಲ್ ಮೈಲು ದೂರದಲ್ಲಿ ಮಂಗಳೂರು ಮೂಲದ ಅಲ್ ಮಸುಲ್ ಬಹಾರ್ ಹೆಸರಿನ ಎರಡು ಬುಲ್ ಟ್ರಾಲ್ ಬೋಟುಗಳು ಕದ್ದು ಮುಚ್ಚಿ ಮೀನುಗಾರಿಕೆ ಮಾಡುತ್ತಿರುವ ಕುರಿತು ಗಂಗೊಳ್ಳಿ ಬಂದರಿನ ನಾಡದೋಣಿ ಮೀನುಗಾರರು ಕೋಸ್ಟ್‌ಗಾರ್ಡ್ ಸಿಬ್ಬಂದಿ ನೆರವಿನಿಂದ ಬೋಟನ್ನು ವಶಕ್ಕೆ ಪಡೆದು ಬಂದರಿಗೆ ಎಳೆದು ತಂದಿದ್ದು, 10 ಲಕ್ಷ ರೂ. ಮೌಲ್ಯದ ಮೀನನ್ನು ವಶಕ್ಕೆ ಪಡೆಯಲಾಗಿದೆ.
ಗುರುವಾರ ಮುಂಜಾನೆ ನಾಡದೋಣಿ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದಾಗ ಈ ವಿಚಾರ ಬೆಳಕಿಗೆ ಬಂದಿದೆ ತಕ್ಷಣವೇ ಮೀನುಗಾರರು ಕೋಸ್ಟ್‍ಗಾರ್ಡ್ ಸಿಬ್ಬಂದಿಗೆ ತಿಳಿಸಿದ್ದರೆ.ತಕ್ಷಣ ಅಲ್ ಮಸುಲ್ ಬಹಾರ್ ಹೆಸರಿನ ಎರಡು ಬುಲ್ ಟ್ರಾಲ್ ಬೋಟುಗಳುಸಹಿತ , ಮೀನುಗಾರರನ್ನು ಕಾನೂನಿನ ಸುರ್ಪದಿಗೆ ಒಪ್ಪಿಸಿದರು. ಬುಲ್ಟ್ರಾಲ್ ಫಿಶಿಂಗ್ ಗೆ ಸುಪ್ರಿಂ ಕೋರ್ಟ್ ಮತ್ತು ಕೇಂದ್ರ ಸರ್ಕಾರದ ನಿಷೇಧವಿದ್ದರೂ ಇಂತಹ ಮೀನುಗಾರಿಕೆಯನ್ನು ಮಾಡುತ್ತಿದ್ದರೆ.ಇಲ್ಲಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲು ಇದಕ್ಕೆ ಸಂಬಂಧಪಟ್ಟವರು ಆಗ್ರಹಿಸಿದ್ದಾರೆ.