ಉಡುಪಿ ಮಠಕ್ಕೆ ಸಚಿವ ಈಶ್ವರಪ್ಪ ಭೇಟಿ ➤ ಮಲ್ಪೆ ಬೀಚ್ ನಲ್ಲಿ ಕೃಷ್ಣನ ಮೂರ್ತಿ ಪ್ರತಿಷ್ಠಾಪನೆಗೆ ಮನವಿ

(ನ್ಯೂಸ್ ಕಡಬ) newskadaba.com ಉಡುಪಿ . 06: ಗುರುವಾರದಂದು ಮಂಗಳೂರಿಗೆ ಆಗಮಿಸಿದ ಸಚಿವ ಈಶ್ವರರಪ್ಪ ರವರು ಪಲಿಮಾರು ಮಠಕ್ಕೆ ಭೇಟಿ ನೀಡಿದ್ದಾರೆ. ಬಳಿಕ ಮಲ್ಪೆ ಬೀಚ್ ನಲ್ಲಿ ಕೃಷ್ಣಮೂರ್ತಿ ಪ್ರತಿಷ್ಠಾಪನೆಗೆ ಮನವಿ ಮಾಡಿಕೊಂಡಿದ್ದಾರೆ. ಪಲಿಮಾರು ಹಿರಿಯ ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು,ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಸಚಿವರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಅನುಗ್ರಹಿಸಿದರು.

800 ವರ್ಷಗಳ ಹಿಂದೆ ಆಚಾರ್ಯ ಮಾಧ್ವರಿಗೆ ಗೋಪಿಚಂದನದೊಳಗೆ ಕಡೆಗೋಲು ಕೃಷ್ಣ ಸಿಕ್ಕಿದ್ದು ಮಲ್ಪೆಯ ಕಡಲ ತೀರದಲ್ಲಿ.ಈ ದೃಷ್ಟಿಯಲ್ಲಿ ಸರ್ಕಾರದ ವತಿಯಿಂದ ಶ್ರೀ ಕೃಷ್ಣನ ಬೃಹತ್ ಮೂರ್ತಿ ಪ್ರತಿಷ್ಠಾಪಿಸಲು ಗುದ್ದಲಿ ಪೂಜೆ ಮಾಡಿ ಹಲವಾರು ವರ್ಷಗಳು ಕಳೆದರೂ ಯಾವುದೇ ಕಾಮಗಾರಿ ಆರಂಭವಾಗದಿರುವ ಬಗ್ಗೆ ಸ್ವಾಮೀಜಿಗಳು ಸಚಿವರ ಗಮನ ಸೆಳೆದರು. ಈ ಕಾರ್ಯದ ಬಗ್ಗೆ ಅವಲೋಕಿಸಿ ಅದರಲ್ಲಿರುವ ಅಡಚಣೆಗಳನ್ನು ಸರಿಪಡಿಸಿ ಮೂರ್ತಿ ಪ್ರತಿಷ್ಠಾಪಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಅಷ್ಠಮಠಾಧೀಶರು ಉಪಸ್ಥಿತರಿದ್ದರು.

Also Read  ಮಂಗಳೂರು: 60 ರೌಡಿ ಶೀಟರ್ ಗಳ ಮನೆಗೆ ಪೊಲೀಸ್ ದಾಳಿ 

 

 

error: Content is protected !!
Scroll to Top