(ನ್ಯೂಸ್ ಕಡಬ) newskadaba.com ಸುಳ್ಯ ನ. 06: ಕುಗ್ರಾಮವಾದ ಕಮಿಲ ಗ್ರಾಮದ ರಸ್ತೆಯ ಪಾಡು ಹೇಳತೀರಾದಂತಾಗಿದೆ. ಬಳ್ಪದಿಂದ ಗುತ್ತಿಗೆದಾರರು ಸಂಪರ್ಕಿಸುವ ಈ ರಸ್ತೆ ಹೊಂಡ ಗುಂಡಿಗಳಿಂದ ಆವರಿಸಿರುವ ಕಮಿಲ ರಸ್ತೆ ಜನರ ನೆಮ್ಮದಿಗೆ ಭಂಗ ಮಾಡಿದೆ. ಯಾವುದೇ ತುರ್ತು ಸಂದರ್ಭದಲ್ಲಿ ಏನೂ ಮಾಡಲಾಗದೆ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸುಳ್ಯ-ಸುಬ್ರಹ್ಮಣ್ಯ ಹಾಗೂ ಪುತ್ತೂರು ಸುಬ್ರಹ್ಮಣ್ಯ ಹೀಗೆ ಎರಡು ರಾಜ್ಯ ಹೆದ್ದಾರಿಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದೆ.ಕುಗ್ರಾಮವಾಗಿರುವ ಕಮಿಲ ಗ್ರಾಮದ ಜನರಿಗೆ ಸಾಕಷ್ಟು ಸಮಸ್ಯೆಗಳಿದ್ದರೂ, ಕೇವಲ ಇರುವ ರಸ್ತೆಯನ್ನು ದುರಸ್ತಿಪಡಿಸಿ ಎನ್ನುವ ಬೇಡಿಕೆಗೆ ಸರಕಾರ ಈ ವರೆಗೂ ಸ್ಪಂದಿಸಿಲ್ಲ. ಈವರೆಗೆ ಅದೆಷ್ಟೋ ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು ಯಾವುದೇ ಬಿಡಿಕಾಸುಪ್ರಯೋಜನವೂ ಆಗಿಲ್ಲ. ಆದರೂ ಕಮಿಲ ಗ್ರಾಮಸ್ಥರು ಇನ್ನೂ ಮನವಿ ಸಲ್ಲಿಸುತ್ತಲೇ ಇದ್ದಾರೆ.ಕೆಳ ಹಂತದ ಅಧಿಕಾರಿ, ಜನಪ್ರತಿನಿಧಿಯಿಂದ ಹಿಡಿದು, ಪ್ರಧಾನಮಂತ್ರಿಯ ಕಾರ್ಯಾಲಯಕ್ಕೂ ಮನವಿ ಮಾಡಿದ್ದಾರೆ.ಚುನಾವಣೆ ಬಂದಾಗ ಮತಯಾಚನೆಗೆ ಬರುವ ಜನಪ್ರತಿನಿಧಿಗಳು ಭರವಸೆ ನೀಡಿ ಹೋದರೆ ಮತ್ತೆ ಇತ್ತ ಕಡೆ ಹಿಂತಿರುಗುವ ಪ್ರಸಂಗವೇ ಇಲ್ಲ, ಎಂದು ಈ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದಕ್ಕೆ ಸಂಬಂದಪಟ್ಟ ಅಧಿಕಾರಿಗಳು ಯಾವಾಗ ಎಚ್ಚೆತ್ತುಕೊಳ್ಳುತ್ತಾರೋ ಕಾದುನೋಡಬೇಕಾಗಿದೆ.