ದೀಪಾವಳಿ ಪಟಾಕಿ ನಿಷೇಧ ➤ ಶೀಘ್ರವೇ ಸರ್ಕಾರದ ಸುತ್ತೋಲೆ ಜಾರಿಗೆ :ಸಿಎಂ ಬಿಎಸ್ವೈ

(ನ್ಯೂಸ್ ಕಡಬ) newskadaba.com ಬೆಂಗಳೂರು, . 06: ಕೊರೋನಾ ಸೋಂಕಿನ ಭೀತಿಯ ಹಿನ್ನಲೆಯಲ್ಲಿ ದೀಪಾವಳಿಯಂದು ಪಟಾಕಿ ಮಾರಾಟ, ಹಚ್ಚೋದಕ್ಕೆ ನಿಷೇಧ ಹೇರಿದೆ.

 

 

ಈಗಾಗಲೇ ರಾಜಸ್ಥಾನ, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಹರಿಯಾಣ ರಾಜ್ಯಗಳಲ್ಲಿ ನಿಷೇಧಿಸಲಾಗಿದೆ. ಇದೇ ಹಾದಿಯನ್ನು ಹಿಡಿದಿರುವ ರಾಜ್ಯ ಸರ್ಕಾರ, ದೀಪಾವಳಿಯಂದು ರಾಜ್ಯದಲ್ಲೂ ಪಟಾಕಿ ನಿಷೇಧಿಸುವಂತ ಮಹತ್ವದ ನಿರ್ಧರವನ್ನು ಕೈಗೊಂಡಿರುವುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದರು. ಇದರಿಂದ ವಾಯುಮಾಲಿನ್ಯ ಹಾಗೂ ಕೊರೊನಾ ವೈರಸ್ ಹರಡುವಿಕೆ ತಡೆಯಬಹುದು. ಪಟಾಕಿ ನಿಷೇಧಿಸುವ ಕುರಿತು ರಾಜ್ಯ ಸರಕಾರ ಆರೋಗ್ಯ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಜೊತೆ ಚರ್ಚೆ ನಡೆಸಿದ ನಂತರ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.ಇನ್ನೂ ಸರ್ಕಾರದ ನಿರ್ಧಾರದಿಂದ ಪಟಾಕಿ ಮಾರಾಟಾರರಿಗೆ  ಮತ್ತು ಪಟಾಕಿ ಖರೀದಿಸಿದ್ದವರಿಗೆ ಶಾಕ್ ಉಂಟಾಗಿದೆ.

Also Read  ವೇತನ ಹೆಚ್ಚಳ ನಿರೀಕ್ಷೆಯಲ್ಲಿದ್ದ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ➤  7ನೇ ವೇತನ ಆಯೋಗ ವರದಿ ಶೀಘ್ರ ಸಲ್ಲಿಕೆಗೆ ಮನವಿ

 

error: Content is protected !!
Scroll to Top