ಸೋಮವಾರಪೇಟೆ : ಸೊಸೆಗೆ ಗುಂಡಿಟ್ಟು ಕೊಲೆಗೆ ಯತ್ನಿಸಿದ ಮಾವ.!

(ನ್ಯೂಸ್ ಕಡಬ) newskadaba.com ಸೋಮವಾರಪೇಟೆ . 06: ಆಸ್ತಿ ವಿವಾದಕ್ಕೆ ಸಂಬಂಧಿಸಿ ಮಾವ ಸೊಸೆಯ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ಸಮೀಪದ ಬೆಟ್ಟದಕೊಪ್ಪ ಗ್ರಾಮದಲ್ಲಿ ನಡೆದಿದೆ.ಗುರುವಾರ ಬೆಳಗ್ಗೆ ಬೆಟ್ಟದಕೊಪ್ಪ ಗ್ರಾಮದ ಐಯ್ಯಪ್ಪ ಎಂಬುವವರು ಮಗನಾದ ಹೂವಯ್ಯನ ಪತ್ನಿ ತೀರ್ಥ ಅವರೊಂದಿಗೆ ರಸ್ತೆಯಲ್ಲಿ ದನ ಕಟ್ಟುವ ವಿಚಾರದಲ್ಲಿ ವಾಗ್ವಾದಕ್ಕಿಳಿದಿದ್ದಾರೆ.

 

ಮಾತಿನ ಚಕಮಕಿ ವಿಪರೀತಕ್ಕೆ ಹೋದ ಪರಿಣಾಮ ಐಯ್ಯಪ್ಪ, ತೀರ್ಥ ಅವರ ಎಡಗೈ ಮತ್ತು ಎದೆ ಭಾಗಕ್ಕೆ ಗುಂಡು ಹಾರಿಸಿದ್ದಾರೆ ಎಂದು ತಿಳಿದು ಬಂದಿದೆ. ಗುಂಡೇಟಿನಿಂದ ಗಾಯಗೊಂಡ ತೀರ್ಥ ಅವರಿಗೆ ಮಡಿಕೇರಿ ಜಿ. ಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ತೀರ್ಥರವರ ಪತಿ ನೀಡಿದ ದೂರಿನ ಆಧಾರದ ಮೇರೆಗೆ ಆರೋಪಿ ಐಯ್ಯಪ್ಪ ಹಾಗೂ ಆತನ ಪತ್ನಿ ಮತ್ತು ಇಬ್ಬರು ಪುತ್ರಿಯರ ವಿರುದ್ಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Also Read  ಅಸಹಾಯಕ ಶಿಕ್ಷಕಿಗೆ ಎಸ್‍ಐ ಸಹಾಯ ➤ ಮಾನವೀಯತೆ ಮೆರೆದ ಪೊಲೀಸ್ ಕಮೀಷನರೇಟ್

 

 

error: Content is protected !!
Scroll to Top