ಮಸೀದಿಗಳ ಧ್ವನಿವರ್ಧಕ ತೆರವಿಗೆ ಡಿಜಿಪಿ ಆದೇಶಿಸಿಲ್ಲ ➤ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಬೆಂಗಳೂರು . 06: ರಾಜ್ಯಾದ್ಯಂತ ಮಸೀದಿಗಳಿಗೆ ಅಳವಡಿಸಿರುವ ಧ್ವನಿವರ್ದಕಗಳನ್ನು ನಿಷೇಧಿಸಿ ತೆರವುಗೊಳಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸುದ್ ಸೂಚಿಸಿದ್ದಾರೆ ಎಂಬ ಪತ್ರ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಕೀಲ ಹರ್ಷ ಮುತಾಲಿಕ್ ಅವರು ಈ ಬಗ್ಗೆ ಪೊಲೀಸ್ ಮಾಹಾ ನಿದೇಶಕರಿಗೆ ಪತ್ರ ಬೆರೆದಿದ್ದಾರೆನ್ನಲಾಗಿದೆ. ಈ ಸಂಬಂಧ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ನಮ್ಮ ಕಚೇರಿಯಿಂದ ಅಂತಹ ಯಾವುದೇ ಆದೇಶ ಹೊರಡಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ರಾಜ್ಯ ಪೊಲೀಸ್ ಇಲಾಖೆಯ ಫ್ಯಾಕ್ಟ್ ಚೆಕ್ ವೆಬ್ ಸೈಟ್ ನಲ್ಲಿ ಅಧಿಕೃತ ಮಾಹಿತಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣ ಮತ್ತು ಕೆಲ ಪ್ರಮುಖ ಮಾಧ್ಯಮಗಳಲ್ಲಿ ಮಸೀದಿ ಧ್ವನಿವರ್ಧಕ ತೆರವುಗೊಳಿಸಲು ಆದೇಶಿಸಿರುವ ಸುದ್ದಿ ಹಬ್ಬಿರುವುದು ಸುಳ್ಳು. ಇಂತಹ ವಂದತಿಗಳಿಗೆ ಕಿವಿಗೊಡದಂತೆ ವಿನಂತಿಸಲಾಗಿದೆ. ಪೊಲೀಸ್ ಇಲಾಖೆಯ ಯಾವುದೋ ಗುಮಾಸ್ತ ಹಿರಿಯ ಅಧಿಕಾರಿಗಳ ಸೂಕ್ತ ಅನುಮತಿ ಪಡೆಯದೆ ಈ ರೀತಿಯ ಪತ್ರವೊಂದನ್ನು ರವಾನಿಸಿರುವ ಮಾಹಿತಿ ಇದೆ. ಆದರೆ, ಇದು ಡಿಜಿಪಿ ಗಮನಕ್ಕೂ ಬಂದಿಲ್ಲ ಎಂದು ತಿಳಿದು ಬಂದಿದೆ.

Also Read  ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 4 ದಿನಗಳ ಕಾಲ ಭಾರೀ ಮಳೆ ಸಾಧ್ಯತೆ ➤ ಯಲ್ಲೋ ಅಲರ್ಟ್ ಘೋಷಣೆ

error: Content is protected !!
Scroll to Top