ಸುಳ್ಯ: ಯುವಕ ನೇಣು ಬಿಗಿದು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಸುಳ್ಯ, . 06: ಆಲೆಟ್ಟಿ ಗ್ರಾಮದ ಅರಂಬೂರು ಸ್ಥಾನದ ಮನೆಯ ಯುವಕನೋರ್ವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ಹರೀಶ ಎಂದು ಗುರುತಿಸಲಾಗಿದೆ.

 

 

ಇವರು ವಯನಾಟ್ ಕುಲವನ್ ದೈವದ ದರ್ಶನ ಪಾತ್ರಿಯಾಗಿ ಕೆಲಸ ನಿರ್ವಹಿಸಿತ್ತಿದ್ದು, ಅರಂಬೂರಿನ ಶ್ರೀ ವಯನಾಟ್ ಕುಲವನ್ ದೈವಸ್ಥಾನದ ಮನೆಯಲ್ಲಿ ವಾಸಮಾಡುತ್ತಿದ್ದರು. ಅವರು ಎಂದಿನಂತೆ ಮನೆಯಲ್ಲಿದ್ದು, ರಾತ್ರಿವೇಳೆ ಮನೆಯ ಪಕ್ಕದ ಗುಡ್ಡೆಯಲ್ಲಿರುವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ತಂದೆ, ತಾಯಿ, ಸಹೋದರ, ಸಹೋದರಿಯರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

Also Read  ಪತಿ-ಪತ್ನಿ ನಡುವೆ ಕಲಹ, ಹಲ್ಲೆ ➤ ಇಬ್ಬರು ಮಕ್ಕಳು ಮೃತ್ಯು

error: Content is protected !!
Scroll to Top