ಕಡಬ  : ಭಾರಿ ಗಾಳಿ ಮಳೆಗೆ ಅಲ್ಲಲ್ಲಿ ಹಾನಿ

(ನ್ಯೂಸ್ ಕಡಬ) newskadaba.com ಕಡಬ . 06: ಕಳೆದ ದಿನ ಸಂಜೆ ವೇಳೆ ಸುರಿದ ಭಾರೀ ಗಾಳಿ ಮಳೆಗೆ ಅಪಾರ ಹಾನಿ ಸಂಭವಿಸಿದೆ. ಸುಂಕದ ಕಟ್ಟೆ, ನೆಟ್ಟಣ ಬಳಿ ವಿದ್ಯುತ್ ಲೈನ್ ಗಳಿಗೆ ಮರಗಳು ಬಿದ್ದು ವಾಹನಗಳು ಓಡಾಡಲು ಪರಾದಡುವಂತಾಗಿತ್ತು.

 

ತಕ್ಷಣವೇ ಕಾರ್ಯಪ್ರವರ್ತರಾದ ಮೆಸ್ಕಾಂ ಸಿಬ್ಬಂದಿಗಳು, ಮರಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಇನ್ನು ಯೇನೆಕಲ್ಲು ಆಸುಪಾಸಿನಲ್ಲಿ ನೂರಾರು ಅಡಿಕೆ ಮರಗಳು ಗಾಳಿಯ ಅಬ್ಬರಕ್ಕೆ ಧರೆಗುರುಳಿದೆ. ತಾ.ಪಂಚಾಯತ್ ಸದಸ್ಯ ಅಶೋಕ್ ನೆಕ್ರಾಜೆರವರ ತೋಟದಲ್ಲಿ 20ಕ್ಕೂ ಅಧಿಕ ಅಡಿಕೆ ಮರಗಳು ಮುರಿದು ಬಿದ್ದಿದೆ.

Also Read  ಬೆಳ್ತಂಗಡಿ :ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದತನ ಅರೇಸ್ಟ್

 

error: Content is protected !!
Scroll to Top